ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯ ಫಿಲಿಪೈನ್ಸ್‌ನಲ್ಲಿ 6.9 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, 25 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ
ರಾತ್ರಿ ನಡೆದ ಭೂಕಂಪದಿಂದ ಕಟ್ಟಡಗಳು ಮತ್ತು ರಸ್ತೆಗಳಿಗೆ ಹಾನಿಯುಂಟಾಗಿದೆ.
ಕಂಪನದಿಂದಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ನಿವಾಸಿಗಳು ಕತ್ತಲೆಯಲ್ಲಿ ತಮ್ಮ ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ. ಚರ್ಚ್‌ಗೆ ಹಾನಿಯಾಗಿದ್ದು, ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಕಡಿತಗೊಂಡಿದೆ.
ಸೆಬು ಪ್ರಾಂತ್ಯದ ಬೊಗೊ ನಗರದ ಈಶಾನ್ಯಕ್ಕೆ ಸುಮಾರು 17 ಕಿಲೋಮೀಟರ್ ದೂರದಲ್ಲಿ ಭೂಕಂಪವಾಗಿದೆ. ಸುಮಾರು 90 ಸಾವಿರ ಜನಸಂಖ್ಯೆ ಹೊಂದಿರುವ ಬೋಗೋ ನಗರದಲ್ಲಿ ಕನಿಷ್ಠ 14 ನಿವಾಸಿಗಳು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ವಿಶ್ವದ ಅತ್ಯಂತ ವಿಪತ್ತು ಪೀಡಿತ ದೇಶಗಳಲ್ಲಿ ಒಂದಾದ ಫಿಲಿಪೈನ್ಸ್, ಸಾಗರದ ಸುತ್ತಲಿನ ಭೂಕಂಪನ ದೋಷಗಳ ಕಮಾನಿನ ಮೇಲೆ ಇರುವುದರಿಂದ ಆಗಾಗ್ಗೆ ಭೂಕಂಪಗಳು ಮತ್ತು ಜ್ವಾಲಾಮುಖಿ ಸ್ಫೋಟಗಳಿಗೆ ಗುರಿಯಾಗುತ್ತಿದೆ.
ಮಧ್ಯ ಫಿಲಿಪೈನ್ಸ್‌ನಲ್ಲಿ ನಡುಗಿದ ಭೂಮಿ: 6.9 ತೀವ್ರತೆಯ ಪ್ರಬಲ ಭೂಕಂಪನಕ್ಕೆ 25ಕ್ಕೂ ಹೆಚ್ಚು ಮಂದಿ ಸಾವು
