January15, 2026
Thursday, January 15, 2026
spot_img

ರಜೆ ಉಂಟು ಅಂತ ಚಿಕ್ಕಮಗಳೂರು ಸುತ್ತಾಡೋಕೆ ಬಂದ್ರೆ ಇದೆಂತ ಅವಸ್ಥೆ ಮಾರ್ರೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಜಯದಶಮಿ ಹಾಗೂ ಆಯುಧಪೂಜೆ ರಜೆಯ ಸರಣಿಯ ಹಿನ್ನೆಲೆ ಚಿಕ್ಕಮಗಳೂರಿನ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಭೇಟಿ ಹೆಚ್ಚಾಗಿದೆ. ವಿಶೇಷವಾಗಿ ಮುಳ್ಳಯ್ಯನಗಿರಿ, ದತ್ತಪೀಠ ಹಾಗೂ ಮಾಣಿಕ್ಯಧಾರ ಭಾಗದಲ್ಲಿ ಸಾವಿರಾರು ಪ್ರವಾಸಿಗರು ಲಗ್ಗೆ ಇಟ್ಟಿದ್ದಾರೆ.

ಪ್ರವಾಸಿಗರ ಹೆಚ್ಚಳದಿಂದಾಗಿ ಮುಳ್ಳಯ್ಯನಗಿರಿ ಮಾರ್ಗದಲ್ಲಿ 4ರಿಂದ 5 ಕಿ.ಮೀ ವರೆಗೆ ವಾಹನಗಳ ಸಾಲು ಕಂಡುಬಂದಿದೆ. ಗಿರಿ ಭಾಗದಲ್ಲಿ ಪ್ರತಿದಿನ ಗರಿಷ್ಠ 1200 ವಾಹನಗಳಿಗೆ ಮಾತ್ರ ಪ್ರವೇಶ ಅವಕಾಶವಿದ್ದು, ಬೆಳಿಗ್ಗೆ 600 ಹಾಗೂ ಮಧ್ಯಾಹ್ನ 600 ವಾಹನಗಳಿಗೆ ಅವಕಾಶ ನೀಡಲಾಗುತ್ತಿದೆ. ಆದರೆ ಪ್ರವಾಸಿಗರ ದಟ್ಟಣೆಯಿಂದ ಈ ಮಿತಿ ಸಾಕಾಗದೆ ವಾಹನ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ.

ಮೇಲಕ್ಕೆ ತೆರಳಿದ ವಾಹನಗಳು ಕೆಳಗಿಳಿಯುವವರೆಗೆ ಹೊಸ ವಾಹನಗಳಿಗೆ ಪ್ರವೇಶ ನೀಡುತ್ತಿರಲಿಲ್ಲ. ಈಗ ಪ್ರವೇಶ ನೀಡಲಾಗುತ್ತಿದ್ದು, ಪ್ರವಾಸಿಗರು ಗಂಟೆಗಳ ಕಾಲ ವಾಹನ ಜಾಮ್‌ನಲ್ಲಿ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೈಮರ ಚೆಕ್‌ಪೋಸ್ಟ್ ವರೆಗೂ ವಾಹನಗಳ ದಟ್ಟಣೆ ಹೆಚ್ಚಿರುವುದು ಪರಿಸರದಲ್ಲಿ ಗೊಂದಲದ ವಾತಾವರಣ ಸೃಷ್ಟಿಸಿದೆ.

Most Read

error: Content is protected !!