ಮೇಷ
ಬಂಧುಮಿತ್ರರನ್ನು ಕಾಣುವ ಅವಕಾಶ. ಹಳೆಯ ನೆನಪುಗಳು ಕೆದಕಬಹುದು. ಆರ್ಥಿಕ ಸಮಸ್ಯೆಗಳು ಪರಿಹಾರ ಕಾಣುತ್ತವೆ. ದೇವರ ಅನುಗ್ರಹವಿದೆ.
ವೃಷಭ
ಗೊಂದಲದ ದಿನ. ಅನಿರೀಕ್ಷಿತ ಬೆಳವಣಿಗೆ ಸಂಭವಿಸುವುದು. ನಿರೀಕ್ಷೆಗಳು ಕೈಗೂಡುವುದಿಲ್ಲ. ಆದರೆ ಮನೋಸ್ಥೈರ್ಯಕ್ಕೆ ಭಂಗ ಬಾರದು.
ಮಿಥುನ
ಪ್ರೀತಿಪಾತ್ರರೊಂದಿಗೆ ನಿಮ್ಮ ಮನದ ಭಾವನೆ ಹಂಚಿಕೊಳ್ಳಲು ಹಿಂಜರಿಯದಿರಿ. ನಿಮಗೆ ಪೂರಕ ಸ್ಪಂದನೆ ದೊರಕುವುದು. ಮನಸ್ಸಿಗೆ ನಿರಾಳತೆ.
ಕಟಕ
ಇತರರಿಗೆ ಸ್ಫೂರ್ತಿ ತುಂಬುವಿರಿ. ಅವರ ಕಷ್ಟಕ್ಕೆ ಸ್ಪಂದಿಸುವಿರಿ. ಆದರೆ ಇದೇವೇಳೆ, ನಿಮ್ಮ ಸಮಸ್ಯೆಗಳನ್ನು ಕಡೆಗಣಿಸಬೇಡಿ. ಅದಕ್ಕೂ ಪರಿಹಾರ ಹುಡುಕಿ.
ಸಿಂಹ
ಕುಟುಂಬ ಸದಸ್ಯರ ಜತೆ ಹೆಚ್ಚು ಕಾಲ ಕಳೆಯುವ ಅವಕಾಶ. ನಿಮ್ಮ ಕುರಿತಂತೆ ಅತೀವ ನಿರೀಕ್ಷೆ ಇಟ್ಟುಕೊಂಡವರಿದ್ದಾರೆ. ಅವರಿಗೆ ನಿರಾಶೆ ತರಬೇಡಿ.
ಕನ್ಯಾ
ನಿಮ್ಮ ಪರಿಶ್ರಮಕ್ಕೆ ಉತ್ತಮ ಫಲ ದೊರಕುವುದು. ಆರ್ಥಿಕ ಲಾಭ ಗಳಿಸುವಿರಿ. ಕುಟುಂಬಸ್ಥರಿಂದ ನಿಮ್ಮ ಪ್ರಯತ್ನಗಳಿಗೆ ಉತ್ತಮ ಬೆಂಬಲ ಲಭ್ಯ.
ತುಲಾ
ಕುಟುಂಬ ಮತ್ತು ವೃತ್ತಿಯ ಮಧ್ಯೆ ಸಮತೋಲನ ಸಾಧಿಸಿರಿ. ಯಾವುದೇ ಒಂದನ್ನು ಕಡೆಗಣಿಸಬೇಡಿ. ವೃತ್ತಿ ಒತ್ತಡ ನಿವಾರಿಸಲು ಕುಟುಂಬ ಸಹಕಾರಿ.
ವೃಶ್ಚಿಕ
ಅನಿರೀಕ್ಷಿತ ಖರ್ಚುಗಳು ಒದಗುವವು. ಹಾಗೆಂದು ಅನವಶ್ಯ ವಸ್ತುಗಳಿಗೆ ಹಣ ವ್ಯಯಿಸಬೇಡಿ. ಬಂಧುಗಳಿಂದ ಶುಭ ಸುದ್ದಿ ಕೇಳುವುದು. ಆರೋಗ್ಯ ತೃಪ್ತಿಕರ.
ಧನು
ಅನಿರೀಕ್ಷಿತ ವಸ್ತುಲಾಭ. ಪ್ರೀತಿಪಾತ್ರರು ನಿಮ್ಮ ಸಂತೋಷದಲ್ಲಿ ಪಾಲುದಾರಿಗಳು. ಕೌಟುಂಬಿಕ ಉದ್ವಿಗ್ನತೆ ನಿವಾರಣೆ, ಉತ್ತಮ ಹೊಂದಾಣಿಕೆ.
ಮಕರ
ಸುತ್ತಲಿನ ವ್ಯಕ್ತಿಗಳು ನಿಮ್ಮ ಕುರಿತಂತೆ ಪ್ರೀತಿ ಹರಿಸುತ್ತಾರೆ. ಅವರ ಸಂಗದಲ್ಲಿ ಸಂತೋಷ. ಇಂತಹ ಸಂತೋಷ ಕೆಡಿಸುವ ವ್ಯಕ್ತಿಗಳೂ ಇರಬಹುದು, ಎಚ್ಚರ.
ಕುಂಭ
ಯಾವುದೇ ಪರಿಸ್ಥಿತಿಯ ಲಾಭ ನಷ್ಟ ನೋಡಿಕೊಂಡೇ ಮುಂದಿನ ಹೆಜ್ಜೆಯಿಡಿ. ಇಲ್ಲದಿದ್ದರೆ ಹಾನಿ ತಟ್ಟಲಿದೆ. ಉದ್ಯಮದಲ್ಲಿ ರಿಸ್ಕ್ ಬೇಡ.
ಮೀನ
ಪ್ರಚಾರವನ್ನು ನೀವು ಬಯಸುವುದಿಲ್ಲ. ಆದರೆ ಇಂದು ತಾನೇತಾನಾಗಿ ಪ್ರಚಾರ ದೊರಕಲಿದೆ. ನಿಮ್ಮ ವೃತ್ತಿಯಲ್ಲಿ ಉತ್ತಮ ಸಾಧನೆ ತೋರುವಿರಿ.