April 28, 2026
Tuesday, April 28, 2026
spot_img

ಬೆಂಗಳೂರಲ್ಲಿ ಭೀಕರ ಅಪಘಾತ : ಕ್ಯಾಂಟರ್ ಹರಿದು ಯುವತಿಯರಿಬ್ಬರ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದ್ದು, ಬೈಕ್ ಸ್ಕಿಡ್ ಕೆಳಗೆ ಬಿದ್ದ ಯುವತಿಯರ ಮೇಲೆ ಕ್ಯಾಂಟರ್ ಹರಿದು ಸ್ಥಳದಲ್ಲೇ ಯುವತಿರಿಬ್ಬರು ಸಾವನ್ನಪ್ಪಿರುವ ಘಟನೆ ಶಿವನಾಪುರ ಕ್ರಾಸ್ ಬಳಿ ಈ ಒಂದು ಭೀಕರ ರಸ್ತೆ ಅಪಘಾತ ಸಂಭವಿಸಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಶಿವನಾಪುರ ಎಂಬಲ್ಲಿ ಕ್ಯಾಂಟರ್ ಚಕ್ರಕ್ಕೆ ಸಿಲುಕಿ ಸ್ಥಳದಲ್ಲಿ ಶೈಲಾ (25) ಹಾಗೂ ಶ್ವೇತಾ (22) ಸಾವನಪ್ಪಿದ್ದಾರೆ.

ಕಾಮಗಾರಿಯಿಂದಾಗಿ ರಸ್ತೆಯಲ್ಲಿ ಜಲ್ಲಿಕಲ್ಲುಗಳು ಕಿಲಾಡಿದ್ದು ಜಲ್ಲಿಕಲಿನಿಂದಾಗಿ ಬೈಕ್ ಸ್ಕೆಡ್ ಆಗಿ ಯುವತಿಯೊಬ್ಬರು ರಸ್ತೆಯ ಮೇಲೆ ಬಿದ್ದಿದ್ದಾರೆ. ಈ ವೇಳೆ ಹಿಂದಿನಿಂದ ಬಂದ ಕ್ಯಾಂಟರ್ ಕೆಳಗಿದ್ದ ಯುವತಿಯರ ಮೇಲೆ ಹರಿದಿದೆ. ಇಬ್ಬರು ಯುವತಿಯರು ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !