ಅಡುಗೆಮನೆಯಲ್ಲಿಯೇ ಸಾಮಾನ್ಯವಾಗಿ ಉಪಯೋಗವಾಗುವ ನಿಂಬೆಹಣ್ಣು, ಆಹಾರದ ರುಚಿಗೆ ಮಾತ್ರವಲ್ಲದೆ ಸ್ವಚ್ಛತೆಗೂ ಕೂಡ ಬಹಳ ಉಪಕಾರಿ ಅನ್ನೋ ವಿಷ್ಯ ನಿಮಗೆ ಗೊತ್ತಿದ್ಯಾ. ಸಾಮಾನ್ಯವಾಗಿ ಅರ್ಧ ಕತ್ತರಿಸಿದ ನಿಂಬೆಹಣ್ಣು ಬಳಸಿದ ನಂತರ ಉಳಿದ ಭಾಗವನ್ನು ಫ್ರಿಡ್ಜ್‌ನಲ್ಲಿ ಇಡುತ್ತೇವೆ. ಆಮೇಲೆ ಅದು ಮರೆತು ಹೋಗಿರುತ್ತೆ ನಾವು ನೋಡುವಷ್ಟರಲ್ಲಿ ಅದು ಒಣಗಿ ಹೋಗಿರುತ್ತೆ. ಆದರೆ ನಿಂಬೆಯಲ್ಲಿರುವ ಪ್ರಕೃತಿಜೀವಾಣುನಾಶಕ ಹಾಗೂ ತೀವ್ರ ಆಮ್ಲೀಯ ಗುಣಗಳು ಅಡುಗೆಮನೆಯಲ್ಲಿ ಬಹಳ ಉಪಯೋಗಕ್ಕೆ ಬರುತ್ತೆ.
- ಟ್ಯಾಪ್ ಮತ್ತು ಸಿಂಕ್ ಸ್ವಚ್ಛಗೊಳಿಸುವುದು: ಟ್ಯಾಪ್ ಅಥವಾ ಸಿಂಕ್ ಮೇಲೆ ಸಂಗ್ರಹವಾದ ಕಲೆಗಳನ್ನು ಒಣ ನಿಂಬೆಯಿಂದ ಉಜ್ಜಿ ಸುಲಭವಾಗಿ ತೆಗೆದುಹಾಕಬಹುದು.
- ಬಾಟಲಿ ಮತ್ತು ಪ್ಯಾನ್ ಸ್ವಚ್ಛಗೊಳಿಸುವುದು: ಬಾಟಲಿ ಜಿಗುಟಾಗಿದ್ದರೆ ಅಥವಾ ಪ್ಯಾನ್ ಮೇಲೆ ತುಕ್ಕು ಇದ್ದರೆ, ಅರ್ಧ ನಿಂಬೆಹಣ್ಣು ಮತ್ತು ಅಡಿಗೆ ಸೋಡಾ ಹಾಕಿ ಉಜ್ಜಿ ಸ್ವಚ್ಛಗೊಳಿಸಬಹುದು.
- ಅಡುಗೆಮನೆಯ ಸ್ಲ್ಯಾಬ್ ಮತ್ತು ಸ್ಟೌವ್ ಸ್ವಚ್ಛಗೊಳಿಸುವುದು: ಎಣ್ಣೆಯಿಂದ ಜಿಗುಟಾಗಿರುವ ಮೇಲ್ಮೈಗಳನ್ನು ನಿಂಬೆಯಿಂದ ಉಜ್ಜಿದರೆ, ತುಕ್ಕು ಮತ್ತು ಕೊಳಕ ಸುಲಭವಾಗಿ ಹೋಗಿಬಿಡುತ್ತದೆ. ಉಜ್ಜಿದ ಮೇಲೆ ಸ್ವಲ್ಪ ಬೆಚ್ಚಗಿನ ನೀರಿನಿಂದ ಸ್ವಚ್ಛಗೊಳಿಸಿ.
- ಬೇಸಿನ್ ಸ್ವಚ್ಛಗೊಳಿಸುವುದು: ಬೇಸಿನ್ ಮೇಲೆ ನಿಂಬೆಯನ್ನು ಉಜ್ಜಿದರೆ, ಕಲೆಗಳು ಸುಲಭವಾಗಿ ಸ್ವಚ್ಛಗೊಳ್ಳುತ್ತದೆ