Sunday, October 12, 2025

Motichoor Laddu | ಬಾಯಲ್ಲಿ ನೀರು ಬರಿಸೋ ಮೋತಿಚೂರ್‌ ಲಡ್ಡುವಿನ ಇತಿಹಾಸ ನಿಮಗೆ ಗೊತ್ತಾ? ತಿನ್ನೋ ಮುಂಚೆ ತಿಳ್ಕೊಳಿ

ಸಿಹಿ ತಿನಿಸುಗಳಲ್ಲಿ ಮೋತಿಚೂರ್ ಲಡ್ಡು ತನ್ನ ವಿಶಿಷ್ಟ ರುಚಿಗೆ ಹೆಚ್ಚು ಜನಪ್ರಿಯ. ಈ ಲಡ್ಡು ಮೂಲತಃ ಬಂಗಾಳದಲ್ಲಿ ಹುಟ್ಟಿಕೊಂಡಿದೆ. ಬಂಗಾಳದಲ್ಲಿ ಸಿಹಿತಿಂಡಿಗಳು ಆಹಾರದ ಅವಿಭಾಜ್ಯ ಅಂಗವೆಂದು ಪರಿಗಣಿಸಲಾಗುತ್ತದೆ. ಹಬ್ಬಗಳು, ಕಾರ್ಯಕ್ರಮಗಳು ಅಥವಾ ವಿಶೇಷ ಸಂದರ್ಭಗಳಲ್ಲಿಯೂ ಮೋತಿಚೂರ್ ಲಡ್ಡು ಇಲ್ಲದೆ ಹಬ್ಬ ಪೂರ್ಣಗೊಳ್ಳುವುದಿಲ್ಲ. ಆದರೆ ಈ ಪ್ರಸಿದ್ಧ ಸಿಹಿತಿಂಡಿ ಹೇಗೆ ಹುಟ್ಟಿಕೊಂಡಿತು ಅನ್ನೋದು ತಿನ್ನೋ ಮುಂಚೆ ತಿಳಿದಿರಬೇಕಲ್ವಾ.

ದಂತಕಥೆಗಳ ಪ್ರಕಾರ, ನೂರಾರು ವರ್ಷಗಳ ಹಿಂದೆ ಮಲ್ಲ ರಾಜರು ಬಂಕುರಾ ಜಿಲ್ಲೆಯ ವಿಷ್ಣುಪುರ ಪ್ರದೇಶವನ್ನು ಆಡಳಿತ ಮಾಡುತ್ತಿದ್ದರು. ಅವರು ತಮ್ಮ ರಾಜಮನೆತನದ ಅಡುಗೆಗಾರರಿಗೆ ದೇವರು ರಾಧಾ ಗೋವಿಂದನಿಗೆ ಅರ್ಪಣೆಗೆ “ರಾಜ ಮೋದಕಂ” ಸಿಹಿತಿಂಡಿ ತಯಾರಿಸಲು ಆದೇಶ ನೀಡಿದರು. ಈ ಆದೇಶದಿಂದ ಮೊದಲು ಮೋತಿಚೂರ್ ಲಡ್ಡು ತಯಾರಿಸಲಾಯಿತು.

ಮೋತಿಚೂರ್ ಲಡ್ಡುವಿನ ವಿಶೇಷತೆಯೇ ಅದರ ಸಣ್ಣ, ಮುತ್ತುಗಳಂತಿರುವ ಸಣ್ಣ ಧಾನ್ಯಗಳು. ಈ ಧಾನ್ಯಗಳು ಹೊಳೆಯುವಂತೆ ಕಾಣೋದ್ರಿಂದ ಈ ಲಡ್ಡುವಿಗೆ “ಮೋತಿಚೂರ್” ಎಂಬ ಹೆಸರು ಕೊಟ್ಟರೆಂದು ಪ್ರತೀತಿ. ಕಾಲಾಂತರದಲ್ಲಿ ಈ ಲಡ್ಡು ದೇಶಾದ್ಯಂತ ಹಾಗೂ ವಿದೇಶಗಳಲ್ಲಿ ಜನಪ್ರಿಯವಾಗಿದ್ದು, ಸಿಹಿಪ್ರೇಮಿಗಳ ಹೃದಯಗಳನ್ನು ಗೆದ್ದಿದೆ.

ಮೋತಿಚೂರ್ ಲಡ್ಡು ಬಂಗಾಳದ ಸಿಹಿ ಪರಂಪರೆ, ಸಂಸ್ಕೃತಿ ಮತ್ತು ಆಹಾರ ಸಂಪ್ರದಾಯಗಳಿಗೆ ಸಾಕ್ಷಿಯಾಗಿದೆ. ಇದು ಸ್ಥಳೀಯ ಹಬ್ಬಗಳು, ಆಚರಣೆಗಳು ಮತ್ತು ಕುಟುಂಬ ಆಚರಣೆಗಳಲ್ಲಿ ವಿಶೇಷ ಸ್ಥಾನ ಪಡೆದಿದೆ.

error: Content is protected !!