Saturday, October 11, 2025

FOOD | ಸೀಫುಡ್ ಪ್ರಿಯರಿಗೆ ಇಲ್ಲಿದೆ ಬಟರ್ ಗಾರ್ಲಿಕ್ ಸ್ಕ್ವಿಡ್ ರೆಸಿಪಿ

ಸೀಫುಡ್ ಪ್ರಿಯರಿಗೆ ಬಟರ್ ಗಾರ್ಲಿಕ್ ಸ್ಕ್ವಿಡ್ ಒಂದು ಸುಲಭವಾಗಿ ತಯಾರಿಸಬಹುದಾದ ಹಾಗೂ ಬಾಯಲ್ಲಿ ನೀರೂರಿಸುವ ಖಾದ್ಯ. ಬೆಣ್ಣೆ ಹಾಗೂ ಬೆಳ್ಳುಳ್ಳಿ ಮಿಕ್ಸ್ ಸ್ಕ್ವಿಡ್‌ಗೆ ವಿಭಿನ್ನ ಪರಿಮಳ ನೀಡುತ್ತೆ. ಈ ಅಡುಗೆಯನ್ನು ಅನ್ನ ಅಥವಾ ಚಪಾತಿಯೊಂದಿಗೆ ಬಡಿಸಿದರೆ ಇನ್ನಷ್ಟು ರುಚಿ ಹೆಚ್ಚುತ್ತದೆ.

ಬೇಕಾಗುವ ಪದಾರ್ಥಗಳು

ಸ್ಕ್ವಿಡ್ – ಅರ್ಧ ಕೆಜಿ
ಬೆಣ್ಣೆ – 4 ಟೀಸ್ಪೂನ್
ಹೆಚ್ಚಿದ ಬೆಳ್ಳುಳ್ಳಿ – 4
ಉಪ್ಪು – ರುಚಿಗೆ ತಕ್ಕಷ್ಟು
ಕರಿಮೆಣಸಿನ ಪುಡಿ – ಸ್ವಾದಕ್ಕನುಸಾರ
ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್

ತಯಾರಿಸುವ ವಿಧಾನ

ಮೊದಲಿಗೆ ಸ್ಕ್ವಿಡ್‌ನ್ನು ಸ್ವಚ್ಛಗೊಳಿಸಿ ಉಂಗುರ ಆಕಾರದಲ್ಲಿ ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಬೇಕು. ಒಂದು ಬಾಣಲೆಯಲ್ಲಿ ಮಧ್ಯಮ ಉರಿಯಲ್ಲಿ ಬೆಣ್ಣೆ ಕರಗಿಸಿ, ಅದಕ್ಕೆ ಹೆಚ್ಚಿದ ಬೆಳ್ಳುಳ್ಳಿಯನ್ನು ಹಾಕಿ ಪರಿಮಳ ಬರುವವರೆಗೆ ಹುರಿಯಬೇಕು. ಬಳಿಕ ಸ್ಕ್ವಿಡ್ ತುಂಡುಗಳನ್ನು ಸೇರಿಸಿ 2–3 ನಿಮಿಷಗಳವರೆಗೆ ಅರೆಪಾರದರ್ಶಕವಾಗಿ ಮೃದುವಾಗುವವರೆಗೆ ಬೇಯಿಸಬೇಕು.

ನಂತರ ಉಪ್ಪು ಮತ್ತು ಕರಿಮೆಣಸಿನ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಸೇರಿಸಿ ಅಲಂಕರಿಸಿ.

error: Content is protected !!