ಹೊಸ ದಿಗಂತ ವರದಿ,ಅಂಕೋಲಾ:
ತಾಲೂಕಿನ ಮಠಾಕೇರಿಯ ಶ್ರೀಕುಂಡೋದರಿ ಮಹಾಮಾಯ ದೇವಾಲಯದಲ್ಲಿ ಅಶ್ವೀನ ಶುಕ್ಲ ಕೋಜಾಗಿರಿ ಹುಣ್ಣಿಮೆಯ ಪ್ರಯುಕ್ತ ಶರನ್ನವರಾತ್ರಿ ಉತ್ಸವ ಸಂಭ್ರಮದಿಂದ ನಡೆಯಿತು.
ದೇವಿಯ ಸನ್ನಿಧಿಯಲ್ಲಿ ವಿಶೇಷ ಧಾರ್ಮಿಕ ಪೂಜಾ ವಿಧಿ ವಿಧಾನಗಳು ನವಚಂಡಿ ಹವನ ನಡೆಯಿತು. ಕುದಿಯುವ ಎಣ್ಣೆಯಲ್ಲಿ ಕೈ ಹಾಕಿ ವಡೆ ತೆಗೆಯುವ ವಿಶೇಷ ಸೇವೆಯನ್ನು ನೆರವೇರಿಸಿದರು.
ನವಚಂಡಿ ಹವನದ ಪೂರ್ಣಾಹುತಿಯ ನಂತರ ಅನ್ನಸಂತರ್ಪಣೆ. ವಡೆ ಪ್ರಸಾದ ವಿತರಣೆ ಕಾರ್ಯಕ್ರಮ ನೆರವೇರಿಸಲಾಯಿತು.
ಸುತ್ತ ಮುತ್ತಲಿನ ನೂರಾರು ಜನರು ಪಾಲ್ಗೊಂಡು ದೇವರ ದರುಶನ ಪಡೆದು ಪ್ರಸಾದ ಸ್ವೀಕರಿಸಿದರು.
ಸಂಜೆ ದೇವಾಲಯದಲ್ಲಿ ವಿಶೇಷ ಪೂಜೆ ದೇವಿಯ ಪಲ್ಲಕಿ ಉತ್ಸವ ಮೊದಲಾದ ಕಾರ್ಯಕ್ರಮಗಳು ನಡೆದವು.