ಹೇಗೆ ಮಾಡೋದು?
ಮೊದಲು ಬಾಣಲೆಗೆ ಎಣ್ಣೆ, ಸಾಸಿವೆ, ಕಡ್ಲೆಬೇಳೆ, ಹಾಕಿ ಬಾಡಿಸಿ
ನಂತರ ಅದಕ್ಕೆ ಕರಿಬೇವಿನ ಸೊಪ್ಪು ಹಾಕಿ, ಜೊತೆಗೆ ಹಸಿಮೆಣಸಿನ ಕಾಯಿ ಹಾಕಿ
ನಂತರ ಈರುಳ್ಳಿ ಹಾಕಿ ಬಾಡಿಸಿ, ನಂತರ ಉಪ್ಪು ಹಾಕಿ
ನಂತರ ಇದಕ್ಕೆ ಟೊಮ್ಯಾಟೊ ಹಾಕಿ ಮಿಕ್ಸ್ ಮಾಡಿ
ನಂತರ ಗರಂ ಮಸಾಲಾ ಹಾಕಿ ಮಿಕ್ಸ್ ಮಾಡಿ
ಅಳತೆಗೆ ತಕ್ಕಷ್ಟು ನೀರು ಹಾಕಿ ಕುದಿಸಿ
ನೀರು ಕುದಿ ಬಂದ ನಂತರ ರವೆ ಹಾಕಿ ಹರಡಿ, ಇದಕ್ಕೆ ಕೊತ್ತಂಬರಿ ಸೊಪ್ಪು, ಕಾಯಿತುರಿ ಹಾಕಿ
ನಂತರ ಆಫ್ ಮಾಡಿ ಮುಚ್ಚಿಡಿ, ಎರಡು ನಿಮಿಷದ ನಂತರ ತೆಗೆದು ತುಪ್ಪ ಹಾಕಿಕೊಂಡು ಬಿಸಿ ಬಿಸಿ ತಿನ್ನಿ
FOOD | ವೆದರ್ ಯಾವುದೇ ಇರಲಿ, ಬಿಸಿ ಬಿಸಿ ಕಾಯಿತುರಿ ಉಪ್ಪಿಟ್ ಸಿಕ್ರೆ ಸೂಪರ್ ಅಲ್ವಾ?
