Saturday, October 11, 2025

FOOD | ರುಚಿ ರುಚಿಯಾದ ಆಲೂ ಬೋಂಡಾ ರೆಸಿಪಿ ಬೇಕಾ? ಇಲ್ಲಿದೆ ನೋಡಿ

ಸಂಜೆ ಬಿಸಿ ಚಹಾದ ಜೊತೆಗೆ ಸವಿಯಲು ಏನಾದರೂ ಬೇಕು ಅನಿಸುವುದು ಸಹಜ. ಹೋಟೆಲ್‌ಗಳಿಗೆ ಹೋಗಿ ಪಾರ್ಸೆಲ್ ತರುವುದು ಕಷ್ಟವಾದಾಗ, ಮನೆಯಲ್ಲಿಯೇ ಸುಲಭವಾಗಿ ಮಾಡಬಹುದಾದ ಸ್ನ್ಯಾಕ್ಸ್ ಎಂದರೆ ಆಲೂ ಬೋಂಡಾ. ಹೊರಗೆ ಕರಕರಾ, ಒಳಗೆ ಮೃದುವಾದ ಆಲೂಗಡ್ಡೆಯ ಹೂರಣದೊಂದಿಗೆ ತಯಾರಾಗುವ ಈ ಬೋಂಡಾ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರಿಗೂ ಬಹಳ ಇಷ್ಟ.

ಬೇಕಾಗುವ ಸಾಮಗ್ರಿಗಳು:

ಕಡಲೆ ಹಿಟ್ಟು – 2 ಕಪ್
ಅಕ್ಕಿ ಹಿಟ್ಟು – 3 ಚಮಚ
ಅಡುಗೆ ಎಣ್ಣೆ – 1 ಕಪ್
ಸಾಸಿವೆ – 1 ಚಮಚ
ಹಸಿಮೆಣಸಿನಕಾಯಿ – 7
ಕೊತ್ತಂಬರಿ ಸೊಪ್ಪು – ಸ್ವಲ್ಪ
ಬೇಯಿಸಿದ ಆಲೂಗಡ್ಡೆ – 4
ಅರಿಶಿಣ – ಚಿಟಿಕೆಯಷ್ಟು
ನಿಂಬೆ ರಸ – ½ ಚಮಚ
ಇಂಗು – ಸ್ವಲ್ಪ
ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ:

ಮೊದಲು ಬೇಯಿಸಿದ ಆಲೂಗಡ್ಡೆಯ ಸಿಪ್ಪೆ ತೆಗೆದು, ಒಂದು ಪಾತ್ರೆಯಲ್ಲಿ ಚೆನ್ನಾಗಿ ಕಿವುಚಿ.

ಬಾಣಲಿಯಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ, ಸಾಸಿವೆ, ಇಂಗು, ಕತ್ತರಿಸಿದ ಹಸಿಮೆಣಸಿನಕಾಯಿ ಮತ್ತು ಉಪ್ಪು ಹಾಕಿ ಫ್ರೈ ಮಾಡಿ. ಇದನ್ನು ಆಲೂಗಡ್ಡೆ ಮಿಶ್ರಣಕ್ಕೆ ಸೇರಿಸಿ. ನಂತರ ಅರಿಶಿಣ, ನಿಂಬೆ ರಸ, ಕೊತ್ತಂಬರಿ ಸೊಪ್ಪು ಹಾಗೂ ಉಪ್ಪು ಹಾಕಿ ಚೆನ್ನಾಗಿ ಕಲಸಿ, ಸಣ್ಣ ಉಂಡೆಗಳಾಗಿ ಮಾಡಿ ಇಟ್ಟುಕೊಳ್ಳಿ.

ಇನ್ನೊಂದು ಪಾತ್ರೆಯಲ್ಲಿ ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಅರಿಶಿಣ, ಖಾರದ ಪುಡಿ ಹಾಗೂ ಉಪ್ಪು ಹಾಕಿ, ಸ್ವಲ್ಪ ಎಣ್ಣೆ ಸೇರಿಸಿ ನೀರಿನಿಂದ ದಪ್ಪ ಹಿಟ್ಟನ್ನು ತಯಾರಿಸಿ. ಆಲೂಗಡ್ಡೆ ಉಂಡೆಯನ್ನು ಹಿಟ್ಟಿನಲ್ಲಿ ಮುಳುಗಿಸಿ ಬಿಸಿ ಎಣ್ಣೆಯಲ್ಲಿ ಹಾಕಿ, ಹೊಂಬಣ್ಣ ಬರುವವರೆಗೆ ಕರಿಯಿರಿ.

error: Content is protected !!