ಹೊಸದಿಗಂತ ಯಲ್ಲಾಪುರ:
ತಾಲೂಕಿನ ಕೆಳಾಸೆಯ ಕೈಗಡಿ ಹೊಳೆಯಲ್ಲಿ ಮುಳುಗಿ ನೀರುಪಾಲಾಗಿದ್ದ ಯುವಕನ ಶವ ಗುರುವಾರ ಬೆಳಿಗ್ಗೆ ಪತ್ತೆಯಾಗಿದೆ.
ಯಲ್ಲಾಪುರ ದ ಸಬಗೇರಿಯ ಸಾಗರ್ ದೇವಾಡಿಗ ಸ್ನೇಹಿತರೊಂದಿಗೆ ಬರ್ಥಡೆ ಪಾರ್ಟಿ ಹೋಗಿದ್ದವನು ನೀರಲ್ಲಿ ಮುಳುಗಿ ನಾಪತ್ತೆಯಾಗಿದ್ದ, ಆದರೆ ಇಂದು ಶವವಾಗಿ ಪತ್ತೆಯಾಗಿದ್ದಾನೆ.
ಶೋಧಕಾರ್ಯದಲ್ಲಿ ಪೊಲೀಸರು, ಅಗ್ನಿಶಾಮಕ ದಳ ಹಾಗೂ ಸ್ಥಳೀಯರು ಭಾಗವಹಿಸಿದ್ದರು. ಈ ಕುರಿತು ಅಂಕೋಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.