March 7, 2026
Saturday, March 7, 2026
spot_img

ಇಸ್ರೇಲ್-ಇರಾನ್ ಯುದ್ಧದ ಕಾರ್ಮೋಡ: ಬೆಂಗಳೂರಿನಿಂದಲ್ಲೂ ವಿಮಾನಗಳ ಹಾರಾಟ ರದ್ದು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಸ್ರೇಲ್-ಇರಾನ್ ನಡುವಿನ ಯುದ್ಧದಿಂದ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತೀವ್ರಗೊಂಡಿದೆ. ಜಾಗತಿಕ ವಿಮಾನಯಾನ ಕ್ಷೇತ್ರದ ಮೇಲೂ ಪರಿಣಾಮ ಬಿದ್ದಿದೆ.

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ‌ ನಿಲ್ದಾಣದ ವೇಳಾಪಟ್ಟಿ ವ್ಯತ್ಯಯವಾಗಿದೆ. ಒಟ್ಟು 19 ವಿಮಾನಗಳ‌ ಹಾರಾಟದಲ್ಲಿ ವ್ಯತ್ಯಾಸ ಉಂಟಾಗಿದೆ.

ಅರೈವಲ್ 9, ಡಿಪಾರ್ಚರ್ 10 ವಿಮಾನಗಳ ಹಾರಾಟ ರದ್ದು ಮಾಡಲಾಗಿದೆ. ಬೆಂಗಳೂರಿನಿಂದ ಬೇರೆ‌ ಕಡೆಗೆ ಹೊರಡಬೇಕಿದ್ದ ವಿಮಾನಗಳು ರದ್ದಾಗಿದೆ. ವಿಮಾನ ನಿಲ್ದಾಣಕ್ಕೆ ಬರುವ ಮುನ್ನಾ ಏರ್​ಲೈನ್ಸ್​​ನೊಂದಿಗೆ ಮಾಹಿತಿ ತಿಳಿದು ಬರುವಂತೆ ಪ್ರಯಾಣಿಕರಿಗೆ ಸೂಚನೆ ನೀಡಲಾಗಿದೆ.

ಇನ್ನು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಮಾಹಿತಿ ನೀಡಲು ಸಹಾಯವಾಣಿ ಜೊತೆಗೆ ಸಹಾಯ ಕೇಂದ್ರ ಸ್ಥಾಪನೆ ಕೂಡ ಸ್ಥಾಪನೆ ಮಾಡಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !