Sunday, October 12, 2025

ಆಗಸ್ಟ್ 2027ರಲ್ಲಿ ಓಡಲಿದೆಯೇ ದೇಶದ ಮೊದಲ ಬುಲೆಟ್‌ ರೈಲು?: ಏನಂದ್ರು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್??

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಾಗತಿಕ ಸವಾಲುಗಳ ನಡುವೆಯೂ ವಿಕಸಿತ ಭಾರತವನ್ನು ನಿರ್ಮಿಸುವಲ್ಲಿ ಯಾವುದೇ ಸಂದೇಹವಿಲ್ಲ. ಭಾರತದ ಮೊದಲ ಬುಲೆಟ್ ರೈಲು ಆಗಸ್ಟ್ 2027 ರ ವೇಳೆಗೆ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಇಂದು ಗುಜರಾತ್‌ನಲ್ಲಿ ಹೇಳಿದರು.

ಮೆಹಸಾನಾದಲ್ಲಿ ನಡೆದ ಮೊದಲ ವೈಬ್ರೆಂಟ್‌ ಗುಜರಾತ್ ಪ್ರಾದೇಶಿಕ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಕಳೆದ 11 ವರ್ಷಗಳಲ್ಲಿ, ರೈಲ್ವೆ ಕ್ಷೇತ್ರದಲ್ಲಿ ಅಗಾಧ ಪ್ರಗತಿಯಾಗಿದೆ. ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ಸ್ ವಲಯಗಳಲ್ಲಿ ಭಾರಿ ಬೆಳವಣಿಗೆಯನ್ನು ಸಾಧಿಸಿದೆ. ಗುಜರಾತ್‌ ಒಂದರಲ್ಲಿಯೇ 2 ಸಾವಿರದ 764 ಕಿಲೋಮೀಟರ್ ಹೊಸ ರೈಲು ಮಾರ್ಗಗಳನ್ನು ನಿರ್ಮಿಸಲಾಗಿದೆ ಎಂದರು.

ಪ್ರಮುಖ ಕೈಗಾರಿಕಾ ಉಪಕ್ರಮಗಳನ್ನು ಬೆಂಬಲಿಸಲು ಕೇಂದ್ರ ಸರ್ಕಾರವು ಗುಜರಾತ್ ಆಡಳಿತದೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ. ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು 30 ಜಪಾನಿನ ರಾಸಾಯನಿಕ ಮತ್ತು ಅನಿಲ ಕಂಪನಿಗಳು ಶೀಘ್ರದಲ್ಲೇ ಗುಜರಾತ್‌ನಲ್ಲಿ ತಮ್ಮ ಘಟಕಗಳನ್ನು ಸ್ಥಾಪಿಸಲಿವೆ ಎಂದು ಸಚಿವರು ಹೇಳಿದರು.

ಕಳೆದ 24 ವರ್ಷಗಳಲ್ಲಿ ವೈಬ್ರಂಟ್ ಗುಜರಾತ್ ಹೂಡಿಕೆ ಶೃಂಗಸಭೆಗಳ ಮೂಲಕ ರಾಜ್ಯವು 68.9 ಶತಕೋಟಿ ಅಮೆರಿಕನ್ ಡಾಲರ್ ಮೌಲ್ಯದ ಹೂಡಿಕೆಗಳನ್ನು ಆಕರ್ಷಿಸಿದೆ. ಇಂದು ಗುಜರಾತ್ ದೇಶದ ಕೈಗಾರಿಕಾ ಉತ್ಪಾದನೆಯ ಶೇಕಡಾ 18 ಮತ್ತು ದೇಶದ ರಫ್ತಿನ ಶೇಕಡಾ 27 ರ ಕೊಡುಗೆ ನೀಡುತ್ತದೆ ಎಂದರು.

error: Content is protected !!