ಬೇಸಿಗೆಯೇ ಇರಲಿ ಅಥವಾ ಚಳಿಗಾಲ ಇರಲಿ ಸ್ವಲ್ಪ ಬಿಸಿಲಿ ತಾಕಿದ್ರು ಸಾಕು ಟ್ಯಾನ್ ಆಗಿ ಬಿಡ್ತೇವೆ. ಈ ಬಿಸಿಲಲ್ಲಿ ತ್ವಚೆಯನ್ನು ಯುವಿ ಕಿರಣಗಳಿಂದ ರಕ್ಷಿಸಿಕೊಳ್ಳಲು ಹೆಚ್ಚಿನವರು ಸನ್‌ಸ್ಕ್ರೀನ್‌ನತ್ತ ಮೊರೆ ಹೋಗುತ್ತಾರೆ. ಸೂರ್ಯನ ಕಿರಣಗಳಿಂದ ಉಂಟಾಗುವ ಕಲೆಗಳು, ಕಪ್ಪು ಮಚ್ಚೆ, ಅಥವಾ ತ್ವಚೆ ಸುಡುವ ಭಯದಿಂದ ಮುಕ್ತಿ ನೀಡುತ್ತದೆ ಎಂದು ನಂಬಿ ಮಹಿಳೆಯರು, ಯುವಕರು ದಿನನಿತ್ಯ ಸನ್‌ಸ್ಕ್ರೀನ್ ಬಳಸುವುದು ರೂಢಿಯಾಗಿದೆ. ಆದರೆ ಇತ್ತೀಚಿನ ಸಂಶೋಧನೆಯೊಂದು ಈ ನಂಬಿಕೆಗೆ ದೊಡ್ಡ ಪ್ರಶ್ನೆ ಎದ್ದಿದೆ.

ಕೆಲವು ಅಧ್ಯಯನ ಪ್ರಕಾರ, ಕೆಲವು ಸನ್‌ಸ್ಕ್ರೀನ್‌ಗಳಲ್ಲಿ “ಬೆಂಜೆನ್” ಎಂಬ ಅಪಾಯಕಾರಿ ರಾಸಾಯನಿಕ ಅಂಶವಿದ್ದು, ಇದು ದೀರ್ಘಾವಧಿಯಲ್ಲಿ ತ್ವಚಾ ಕ್ಯಾನ್ಸರ್‌ಗೆ ಕಾರಣವಾಗಬಹುದು ಎಂದು ಎಚ್ಚರಿಸಿದೆ. ಬೆಂಜೆನ್ ಎನ್ನುವುದು ಕಾರ್ಸಿನೋಜೆನ್ ಅಂದರೆ ಕ್ಯಾನ್ಸರ್ ಉಂಟುಮಾಡುವ ವಸ್ತು. ಇದು ಪ್ರಾರಂಭದಲ್ಲಿ ಚರ್ಮದ ಮೇಲೆ ತಾತ್ಕಾಲಿಕ ರಕ್ಷಣೆ ನೀಡಿದರೂ, ನಂತರ ಚರ್ಮದ ಕೋಶಗಳಿಗೆ ಹಾನಿ ಉಂಟುಮಾಡುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

ಜಾಹಿರಾತುಗಳಲ್ಲಿ ತೋರಿಸುವ ಎಲ್ಲಾ ಸನ್‌ಸ್ಕ್ರೀನ್‌ಗಳು ಸುರಕ್ಷಿತವಲ್ಲ. ವೈದ್ಯಕೀಯ ಸಲಹೆ ಇಲ್ಲದೆ ಯಾವುದೇ ಸನ್‌ಸ್ಕ್ರೀನ್ ಬಳಕೆ ಮಾಡಿದರೆ, ಅದು ತಾತ್ಕಾಲಿಕ ರಕ್ಷಣೆಯ ಬದಲು ದೀರ್ಘಾವಧಿಯ ಹಾನಿಗೆ ಕಾರಣವಾಗಬಹುದು. ವೈದ್ಯರ ಸಲಹೆಯಂತೆ, ನೈಸರ್ಗಿಕ ಅಂಶಗಳುಳ್ಳ ಅಥವಾ ಮಿನರಲ್ ಬೇಸ್‌ಡ್ ಸನ್‌ಸ್ಕ್ರೀನ್‌ಗಳು ಬಳಸುವುದು ಉತ್ತಮ ಎಂದು ತಜ್ಞರು ಹೇಳುತ್ತಾರೆ.

ಆದರೆ ಈ ಅಧ್ಯಯನವು ಇನ್ನೂ ಆರಂಭಿಕ ಹಂತದಲ್ಲಿದ್ದು, ಎಲ್ಲ ಸನ್‌ಸ್ಕ್ರೀನ್‌ಗಳೂ ಹಾನಿಕಾರಕ ಎಂಬ ನಿರ್ಣಯಕ್ಕೆ ಬರಲು ಸಾಧ್ಯವಿಲ್ಲ. ಆದ್ದರಿಂದ ಆತಂಕಕ್ಕಿಂತ ಎಚ್ಚರಿಕೆಯೇ ಸೂಕ್ತ. ಯಾವುದೇ ಪ್ರಾಡಕ್ಟ್ ಖರೀದಿಸುವ ಮೊದಲು ಅದರ ಅಂಶಗಳನ್ನು ಓದಿ, ಅಗತ್ಯವಿದ್ದರೆ ಚರ್ಮರೋಗ ತಜ್ಞರ ಸಲಹೆ ಪಡೆಯುವುದು ಸೂಕ್ತ.