Saturday, October 11, 2025

ಬೆಂಗಳೂರಿನಲ್ಲಿ ಮಳೆಯ ರೌದ್ರಾವತಾರ.. ಏನೆಲ್ಲಾ ಆಗಿದೆ ಗೊತ್ತುಂಟಾ: ಇದು ರೋಡ್ ಅಲ್ಲ ಕೆರೆ!

ಕಳೆದ ರಾತ್ರಿ ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ನಗರದಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದ್ದು, ರಸ್ತೆಗಳು ಜಲಾವೃತವಾಗಿವೆ. ಇದರ ಪರಿಣಾಮವಾಗಿ ಸಂಚಾರ ದಟ್ಟಣೆ ಉಂಟಾಗಿದ್ದು, ವಾಹನ ಸಂಚಾರ ನಿಧಾನವಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.


ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ನಗರದ ಪ್ರಮುಖ ಮಾರ್ಗಗಳಲ್ಲಿ ನೀರು ನಿಂತಿದೆ. ರಾಯಸಂದ್ರದಿಂದ ಚೂಡಸಂದ್ರ, ವರ್ತೂರಿನಿಂದ ಗುಂಜೂರು, ಐಟಿಐ ಗೇಟ್‌ನಿಂದ ಕಸ್ತೂರಿನಗರ, ವೀರಸಂದ್ರದಿಂದ ಹುಸ್ಕೂರು ಗೇಟ್, ಹೆಬ್ಬಾಳದಿಂದ ವಿಮಾನ ನಿಲ್ದಾಣ, ಬೊಮ್ಮನಹಳ್ಳಿಯಿಂದ ರೂಪೇನ ಅಗ್ರಹಾರ ಹಾಗೂ ಅಯ್ಯಪ್ಪ ಅಂಡರ್‌ಪಾಸ್ ಮಡಿವಾಳದಿಂದ ಎಸ್‌ಪಿ ರಸ್ತೆಯ ಕಡೆಗೆ ಹೋಗುವ ಮಾರ್ಗಗಳು ಜಲಾವೃತಗೊಂಡಿವೆ.


ಈ ಎಲ್ಲಾ ಪ್ರದೇಶಗಳಲ್ಲಿ ರಸ್ತೆಯ ಮೇಲೆ ಮಳೆ ನೀರು ನಿಂತಿರುವ ಕಾರಣ ವಾಹನಗಳ ಸಂಚಾರವು ನಿಧಾನ ಗತಿಯಲ್ಲಿರುತ್ತದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ. ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಲಾಗಿದೆ.

error: Content is protected !!