ಚಿಕನ್ ಪ್ರಿಯರೆ, ತುಂಬಾ ಸರಳ ಮತ್ತು ರುಚಿಕರ ಚಿಕನ್ ತಿಂಡಿ ಹುಡುಕುತ್ತಿದ್ದೀರಾ? ಈ ಗ್ರೀನ್ ಚಿಲ್ಲಿ ಚಿಕನ್ ರೆಸಿಪಿ ನಿಮಗಾಗಿ. ಮಾಡೋದು ತುಂಬಾ ಸರಳ.
ಬೇಕಾಗುವ ಸಾಮಾಗ್ರಿಗಳು
ಬೋನ್‍ಲೆಸ್ ಚಿಕನ್ – ಅರ್ಧ ಕೆ.ಜಿ
ಈರುಳ್ಳಿ – 1
ಕೊತ್ತಂಬರಿ ಸೊಪ್ಪು – ಸ್ವಲ್ಪ
ಪುದಿನಾ ಸೊಪ್ಪು – ಸ್ವಲ್ಪ
ಮೊಸರು – ಅರ್ಧ ಕಪ್
ಒಣ ಮೆಂತ್ಯೆ ಎಲೆ ಪುಡಿ – 1 ಚಮಚ
ಹಸಿರು ಮೆಣಸಿನಕಾಯಿ – 10
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 2 ಚಮಚ
ಚಕ್ಕೆ – 1
ಗರಂ ಮಸಾಲ ಪುಡಿ – 1 ಚಮಚ
ದನಿಯಾ ಪುಡಿ – 1 ಚಮಚ
ಜೀರಿಗೆ ಪುಡಿ – 1 ಚಮಚ
ಚಿಲ್ಲಿ ಪುಡಿ – ಅರ್ಧ ಚಮಚ
ಎಣ್ಣೆ – 3-4 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಮಾಡುವ ವಿಧಾನ
ಮಿಕ್ಸಿಯಲ್ಲಿ ಪುದಿನಾ, ಕೊತ್ತಂಬರಿ ಸೊಪ್ಪು, ಹಸಿರು ಮೆಣಸಿನಕಾಯಿ ಮತ್ತು ಮೊಸರು ಹಾಕಿ ಚೆನ್ನಾಗಿ ರುಬ್ಬಿ ಮಸಾಲಾ ತಯಾರಿಸಿ.
ಒಂದು ಪ್ಯಾನ್‌ನಲ್ಲಿ ಎಣ್ಣೆ ಹಾಕಿ ಬಿಸಿಯಾದ ಮೇಲೆ ಚಕ್ಕೆ ಹಾಗೂ ಸಣ್ಣದಾಗಿ ಕತ್ತರಿಸಿದ ಈರುಳ್ಳಿಯನ್ನು ಫ್ರೈ ಮಾಡಿ. ಈಗ ತೊಳೆದ ಚಿಕನ್ ಹಾಕಿ ಗೋಲ್ಡನ್ ಬಣ್ಣ ಬರುವವರೆಗೆ ಫ್ರೈ ಮಾಡಿ.
ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಗರಂ ಮಸಾಲಾ, ದನಿಯಾ ಪುಡಿ, ಜೀರಿಗೆ ಪುಡಿ ಮತ್ತು ಚಿಲ್ಲಿ ಪುಡಿ ಸೇರಿಸಿ ಚೆನ್ನಾಗಿ ಹದಗೊಳಿಸಿ ಫ್ರೈ ಮಾಡಿ.ಇದಕ್ಕೆ ರುಬ್ಬಿದ ಹಸಿರು ಮಸಾಲಾ, ಸ್ವಲ್ಪ ನೀರು ಮತ್ತು ಉಪ್ಪು ಹಾಕಿ 4-5 ನಿಮಿಷ ಪ್ಯಾನ್ ಮುಚ್ಚಿ ಬೇಯಿಸಿ. ಕೊನೆಗೆ ಒಣ ಮೆಂತ್ಯೆ ಎಲೆ ಪುಡಿ ಹಾಕಿ ಸರ್ವ್ ಮಾಡಿ.