October 2, 2026
Friday, October 2, 2026
spot_img

FOOD | ಈ ರೀತಿಯ ಗೆಣಸಿನ ರವಾ ಫ್ರೈ ನೀವು ತಿಂದಿರೋಕೆ ಸಾಧ್ಯನೇ ಇಲ್ಲ

ಚಹಾ ಸಮಯಕ್ಕೆ ಅಥವಾ ಊಟದ ಜೊತೆಗೆ ಸವಿಯಲು ಸೂಪರ್ ಆಗಿರುವ ಫ್ರೈ ಬೇಕು ಅಂದಾಗ ಗೆಣಸಿನ ರವಾ ಫ್ರೈ ಟ್ರೈ ಮಾಡಿ.

ಬೇಕಾಗುವ ಪದಾರ್ಥಗಳು

ಗೆಣಸು – 2
ರವಾ – ಅರ್ಧ ಕಪ್
ಅಕ್ಕಿಹಿಟ್ಟು – 2 ಟೇಬಲ್ ಸ್ಪೂನ್
ಮೆಣಸಿನ ಪುಡಿ – ಅರ್ಧ ಟೀ ಸ್ಪೂನ್
ಅರಿಶಿಣ – ಸ್ವಲ್ಪ
ಗರಂ ಮಸಾಲಾ – ಚಿಟಿಕೆ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಕರಿಯಲು

ಮಾಡುವ ವಿಧಾನ

ಮೊದಲು ಗೆಣಸಿನ ಸಿಪ್ಪೆ ತೆಗೆದು, ಸಣ್ಣ ಸ್ಲೈಸ್ ಅಥವಾ ಉದ್ದ ತುಂಡುಗಳಾಗಿ ಕತ್ತರಿಸಿ. ನೀರಿನಲ್ಲಿ ಸ್ವಲ್ಪ ತೊಳೆದು ಒಣಗಲು ಬಿಡಿ.

ಒಂದು ಪಾತ್ರೆಯಲ್ಲಿ ರವಾ, ಅಕ್ಕಿಹಿಟ್ಟು, ಮೆಣಸಿನ ಪುಡಿ, ಅರಿಶಿಣ, ಗರಂ ಮಸಾಲಾ ಮತ್ತು ಉಪ್ಪು ಸೇರಿಸಿ ಕಲಸಿ. ಈಗ ಗೆಣಸಿನ ತುಂಡುಗಳನ್ನು ಈ ಮಿಶ್ರಣದಲ್ಲಿ ಚೆನ್ನಾಗಿ ಲೇಪಿಸಿ.

ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಗೆಣಸಿನ ತುಂಡುಗಳನ್ನು ಮಧ್ಯಮ ಉರಿಯಲ್ಲಿ ಹುರಿಯಿರಿ. ಎರಡೂ ಬದಿಗಳು ಬಂಗಾರದ ಬಣ್ಣಕ್ಕೆ ಬರುವವರೆಗೆ ಕರಿಯಿರಿ.

ಬಿಸಿ ಬಿಸಿ ಗೆಣಸಿನ ರವಾ ಫ್ರೈ ಅನ್ನು ಟೊಮೇಟೊ ಸಾಸ್ ಅಥವಾ ಹಸಿರು ಚಟ್ನಿಯ ಜೊತೆ ಸವಿಯಿರಿ.

Must Read