ಹೊಸದಿಗಂತ ವರದಿ ಬೀದರ್:
ರಮ್ಮಿ, 2 ಪತ್ತಿ, ಕ್ರಿಕೆಟ್ ಸಂಬಂಧಿಸಿದ ಡ್ರೀಮ್ 11, ಮೈಸರ್ಕಲ್11, ಎಮ್.ಪಿ.ಎಲ್ ಅಲ್ಲದೇ ಅನೇಕ ಬೆಟ್ಟಿಂಗ್ ಆಪ್ ಗಳನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ಬ್ಯಾನ್ ಮಾಡಿದ್ದು ಬಹಿರಂಗ ವಿಚಾರ.
ಇತ್ತಿಚೆಗೆ ಕಳೆದ ತಿಂಗಳು ನಡೆದ ಏಷಿಯಾ ಕಪ್ ಕ್ರಿಕೆಟ್ ಟೂರ್ನಾಮೆಂಟ್ ವೇಳೆ ಭಾರತ ಹಾಗೂ ಪಾಕಿಸ್ತಾನ ನಡುವೆ ನಡೆದ ಪ್ರತಿಯೊಂದು ಮ್ಯಾಚ್ ವೇಳೆ ಬೆಟ್ಟಿಂಗ್ ದಂಧೆ ಜೋರಾಗಿಯೇ ನಡೆದಿದೆ. ಈ ವೇಳೆ ಬೆಟ್ಟಿಂಗ್ ಜಾವಕ್ಕೆ ಸಿಲುಕಿ ಹಣ ಕಳೆದುಕೊಂಡು ದಿವಾಳಿಯಾಗಿದ್ದಾರೆ. ಪೊಲೀಸರ ಮೂಗಿನಡಿಯೇ ಕೊಟ್ಯಾಂತರ ರೂಪಾಯಿಗಳ ಬೆಟ್ಟಿಂಗ್ ಕಳ್ಳಾಟ ನಡೆಯುತ್ತಿದ್ದರೂ ಏನು ತಿಳಿಯದಂತೆ ಪೊಲೀಸರು ಕಣ್ಮುಚ್ಚಿ ಕುಳಿತಿದ್ದಾರೆ.
ಹೆಚ್ಚಾಗಿ ಕಾಲೇಜು ಯುವಕರನ್ನೇ ಗುರಿಯಾಗಿಸಿ ಈ ರೀತಿ ಜಾಲ ಬಿಸಿ ಹಣ ಮಾಡುವ ದಂಧೆ ಜಿಲ್ಲೆಯಲ್ಲಿ ಕಾಲು ಚಾಚಿದೆ ಇದಕ್ಕೆ ಕಡಿವಾಣ ಹಾಕಲು ಪೊಲೀಸರು ಕ್ರಮ ವಹಿಸಬೇಕಿದೆ. ಹಾಗೂ ಸಾರ್ವಜನಿಕರು ಈ ಬೆಟ್ಟಿಂಗ್ ಜಾಲಕ್ಕೆ ತುತ್ತಾಗದಂತೆ ಜಾಗೃತರಾಗಬೇಕಿದೆ.