ಬೆಳಿಗ್ಗೆ ಎದ್ದ ತಕ್ಷಣ ತಾಯಂದಿರ ಮೊದಲ ಯೋಚನೆ – “ಇವತ್ತು ತಿಂಡಿಗೆ ಏನು ಮಾಡೋದು ?” ಅನ್ನೋದೇ! ಅಂತಹ ಟೈಮ್ ನಲ್ಲಿ ತ್ವರಿತವಾಗಿ ತಯಾರಿಸಬಹುದಾದ, ಎಲ್ಲರಿಗೂ ಇಷ್ಟವಾಗುವ ಒಂದು ಸಿಂಪಲ್ ತಿಂಡಿ ಎಂದರೆ ರವೆ ದೋಸೆ.
ಬೇಕಾಗುವ ಸಾಮಾಗ್ರಿಗಳು:
ರವೆ – 1 ಕಪ್
ಅಕ್ಕಿ ಹಿಟ್ಟು – ½ ಕಪ್
ಮೈದಾ ಹಿಟ್ಟು – ¼ ಕಪ್
ಸಣ್ಣಗೆ ಕತ್ತರಿಸಿದ ಹಸಿಮೆಣಸಿನಕಾಯಿ – 1
ಜೀರಿಗೆ – ½ ಟೀಸ್ಪೂನ್
ಮೊಸರು – ¼ ಕಪ್
ಈರುಳ್ಳಿ (ಚಿಕ್ಕದಾಗಿ ಕತ್ತರಿಸಿದ್ದು) – 2 ಟೀಸ್ಪೂನ್
ಕೊತ್ತಂಬರಿ ಸೊಪ್ಪು – ಅರ್ಧ ಕಪ್
ಎಣ್ಣೆ – ಅಗತ್ಯವಷ್ಟು
ಉಪ್ಪು – ರುಚಿಗೆ ತಕ್ಕಷ್ಟು
ಮಾಡುವ ವಿಧಾನ:
ಒಂದು ದೊಡ್ಡ ಪಾತ್ರೆಯಲ್ಲಿ ರವೆ, ಅಕ್ಕಿ ಹಿಟ್ಟು, ಮೈದಾ ಹಿಟ್ಟು, ಹಸಿಮೆಣಸಿನಕಾಯಿ, ಜೀರಿಗೆ, ಉಪ್ಪು ಮತ್ತು ಮೊಸರು ಸೇರಿಸಿ. ಈಗ ಸುಮಾರು 2 ಕಪ್ ನೀರು ಸೇರಿಸಿ ಚೆನ್ನಾಗಿ ಕಲಸಿ, ಹಿಟ್ಟನ್ನು 15 ನಿಮಿಷಗಳ ಕಾಲ ಬಿಟ್ಟು ಬಿಡಿ.
ನಂತರ ಮತ್ತೆ ಅರ್ಧ ಕಪ್ ನೀರು ಸೇರಿಸಿ ತೆಳುವಾದ ಮಜ್ಜಿಗೆಯಂಥ ಹಿಟ್ಟನ್ನು ತಯಾರಿಸಿ. ಕಾವಲಿಯನ್ನು ಬಿಸಿ ಮಾಡಿ, ಸ್ವಲ್ಪ ನೀರು ಸಿಂಪಡಿಸಿ ಬಟ್ಟೆಯಿಂದ ಒರೆಸಿ. ಅದರ ಮೇಲೆ ಸಣ್ಣಗೆ ಹೆಚ್ಚಿದ ಈರುಳ್ಳಿ ಮತ್ತು ಕೊತ್ತಂಬರಿ ಸೊಪ್ಪು ಹರಡಿ. ಹಿಟ್ಟನ್ನು ಲೋಟದಿಂದ ಸುರಿದು, ಮೇಲಕ್ಕೆ ಒಂದು ಚಮಚ ಎಣ್ಣೆ ಹಾಕಿ. ಮುಚ್ಚಳ ಮುಚ್ಚಿ ಮಧ್ಯಮ ಉರಿಯಲ್ಲಿ ಗರಿಯಾಗುವವರೆಗೆ ಬೇಯಿಸಿ.