Thursday, October 23, 2025

ಭಾರತ-ಆಸ್ಟ್ರೇಲಿಯಾ ನಡುವೆ 4ನೇ ಆವೃತ್ತಿಯ ಆಸ್ಟ್ರಾಹಿಂದ್: ಪರ್ತ್ ನಲ್ಲಿ ನಡೆಯಲಿದೆ ರೋಚಕ ಜಂಟಿ ಸಮರಾಭ್ಯಾಸ


ಹೊಸದಿಗಂತ ಡಿಜಿಟಲ್ ಡೆಸ್ಕ್:


ಭಾರತ- ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಆವೃತ್ತಿಯ ಜಂಟಿ ಸಮರಾಭ್ಯಾಸ ಆಸ್ಟ್ರಾಹಿಂದ್- 2025 ಪರ್ತ್ ನಲ್ಲಿ ನಾಳೆ ಆರಂಭವಾಗಲಿದೆ.


ಇದರಲ್ಲಿ ಪಾಲ್ಗೊಳ್ಳಲು 120 ಸಿಬ್ಬಂದಿಯ ಭಾರತೀಯ ಸೇನಾ ತಂಡ ಭಾರತದಿಂದ ತೆರಳಿದ್ದು, ಸಮರಾಭ್ಯಾಸ ಈ ತಿಂಗಳ 26ಕ್ಕೆ ಕೊನೆಗೊಳ್ಳಲಿದೆ. ಭಾರತೀಯ ಸೇನಾ ತಂಡದ ಮುಂದಾಳತ್ವವನ್ನು ಗೂರ್ಖಾ ರೈಫಲ್ಸ್ ಬೆಟಾಲಿಯನ್ ವಹಿಸಿದೆ. ಸೇವಾ ಸಹಕಾರ ವೃದ್ಧಿ, ಕಾರ್ಯಾಚರಣೆ ಸುಧಾರಣೆ, ಸಮರಾಭ್ಯಾಸದಲ್ಲಿ ಪಾಲ್ಗೊಳ್ಳುವ ಸೇನೆಗಳಿಗೆ ವೇದಿಕೆ ಒದಗಿಸಿಕೊಡುವುದು ಸಮರಾಭ್ಯಾಸದ ಉದ್ದೇಶವಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

error: Content is protected !!