July 31, 2026
Friday, July 31, 2026
spot_img

ಅಸ್ಸಾಂ ಕಾಂಗ್ರೆಸ್ ನಲ್ಲಿ ಹೈಡ್ರಾಮಾ: ರಾಜೀನಾಮೆ ನೀಡಿದ ಕೆಲವೇ ಗಂಟೆಯಲ್ಲಿ ಭೂಪೇನ್ ಬೋರಾ ಯೂಟರ್ನ್‌!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಸ್ಸಾಂ ಕಾಂಗ್ರೆಸ್ ಘಟಕದಲ್ಲಿ ಹೊಸ ಡ್ರಾಮಾ ಶುರುವಾಗಿದ್ದು, ಬೆಳಗ್ಗೆ ಮಾಜಿ ಅಧ್ಯಕ್ಷ ಭೂಪೇನ್ ಬೋರಾ ಪಕ್ಷ ತೊರೆಯುವುದಾಗಿ ತಿಳಿಸಿದ್ದು, ಇದೀಗ ಕೆಲವೇ ಗಂಟೆಯಲ್ಲಿ ಯೂಟರ್ನ್‌ ಹೊಡೆದಿದ್ದಾರೆ .

ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೂ ಕೆಲವೇ ವಾರ ಬಾಕಿ ಇರುವಾಗಲೇ ಕಾಂಗ್ರೆಸ್ ಪಕ್ಷದಲ್ಲಿ ಸರಿಯಾದ ಸ್ಥಾನಮಾನ ಸಿಗುತ್ತಿಲ್ಲ ಎಂದಿದ್ದ ಭೂಪೇನ್ ಬೋರಾ,32 ವರ್ಷಗಳ ದೀರ್ಘ ರಾಜಕೀಯಕ್ಕೆ ತೆರೆ ಎಳೆಯುವುದಾಗಿ ತಿಳಿಸಿದ್ದರು.

ಇದೀಗ ಈ ವಿಚಾರದಲ್ಲಿ ರಾಹುಲ್ ಗಾಂಧಿ ಎಂಟ್ರಿಕೊಟ್ಟಿದ್ದು, ಗೌರವ್ ಗೊಗೊಯಿ ಅವರೊಂದಿಗೆ ನಡೆದ ಸಭೆಯ ಬಳಿಕ ಸಂಧಾನ ಯಶಸ್ವಿಯಾಗಿ ಬೋರಾ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ .

ಈ ಕುರಿತು ಖುದ್ದು ಬೋರಾ ಹೇಳಿದ್ದು, ಇಂದು ನನ್ನ ಪಕ್ಷದ ನಾಯಕರು ನನ್ನನ್ನು ಭೇಟಿ ಮಾಡಿದ್ದು, ಈ ವೇಳೆ ಅಸ್ಸಾಂನ ಕಾಂಗ್ರೆಸ್ ಘಟಕದಲ್ಲಿ ನಡೆಯುತ್ತಿರುವ ಅನೇಕ ವಿಚಾರಗಳು ಚರ್ಚಿಸಿದ್ದೇನೆ. ಮತ್ತೊಮ್ಮೆ ಆಲೋಚಿಸಲು ಒಂದು ದಿನ ಕಾಲಾವಕಾಶ ಕೇಳಿದ್ದೇನೆ. ನಾಳೆ ಜಿತೇಂದ್ರ ಸಿಂಗ್ ಅವರನ್ನು ಮತ್ತೆ ಭೇಟಿ ಮಾಡಿ ನನ್ನ ನಿರ್ಧಾರವನ್ನು ತಿಳಿಸುತ್ತೇನೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ರಾಜ್ಯ ಉಸ್ತುವಾರಿ ಜಿತೇಂದ್ರ ಸಿಂಗ್ ಮಾತನಾಡುತ್ತಾ, ಭೂಪೇನ್ ಬೋರಾ ನಮ್ಮ ಹಿರಿಯ ನಾಯಕರು. ಕೆಲವೊಮ್ಮೆ ಕುಟುಂಬದೊಳಗೆ ಭಿನ್ನಾಭಿಪ್ರಾಯಗಳಿರುವುದು ಸಾಮಾನ್ಯ. ಆದರೆ ನಮ್ಮದು ಪ್ರಜಾಪ್ರಭುತ್ವ ಪಕ್ಷ ಎಂದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !