Sunday, November 16, 2025

FOOD | ಮನೆಯಲ್ಲೇ ಮಾಡಿ ಹೋಟೆಲ್ ಸ್ಟೈಲ್ ಪನೀರ್ ಬಿರಿಯಾನಿ!

ಬೆಳಗ್ಗೆ ತಿಂಡಿಗೆ ಪನೀರ್ ಬಿರಿಯಾನಿ ಒಂದು ಪರ್ಫೆಕ್ಟ್ ಆಯ್ಕೆ. ಬಿಸಿ ಬಿರಿಯಾನಿಯ ಸುವಾಸನೆ ಮನೆ ತುಂಬಿದರೆ, ತಿನ್ನುವ ಮೊದಲುಲೇ ಹೊಟ್ಟೆ ಹಸಿವು ಹೆಚ್ಚಾಗುತ್ತೆ ಖಂಡಿತ. ಕೇವಲ 30 ನಿಮಿಷಗಳಲ್ಲಿ ತಯಾರಿಸಬಹುದಾದ ಈ ಪನೀರ್ ಬಿರಿಯಾನಿ ಮನೆಮಂದಿಗೆ ಇಷ್ಟವಾಗುತ್ತೆ.

ಬೇಕಾಗುವ ಸಾಮಾಗ್ರಿಗಳು:

ಪನೀರ್ – ಅರ್ಧ ಕೆಜಿ
ಅಕ್ಕಿ – 2 ಕಪ್
ತುಪ್ಪ – ಅರ್ಧ ಕಪ್
ಅಡುಗೆ ಎಣ್ಣೆ – 2 ಚಮಚ
ಜೀರಿಗೆ – 1 ಚಮಚ
ಈರುಳ್ಳಿ – 3
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 2 ಚಮಚ
ಚಕ್ಕೆ, ಏಲಕ್ಕಿ, ಲವಂಗ – ಸ್ವಲ್ಪ
ಪಲಾವ್ ಎಲೆ – ಸ್ವಲ್ಪ
ಹಸಿಮೆಣಸು – 4
ಕ್ಯಾರೆಟ್ – 1
ಕೊತ್ತಂಬರಿ ಸೊಪ್ಪು – ಸ್ವಲ್ಪ
ಪುದಿನ ಸೊಪ್ಪು – ಸ್ವಲ್ಪ
ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ:

ಮೊದಲು ಅಕ್ಕಿಯನ್ನು ತೊಳೆದು 15-20 ನಿಮಿಷ ನೀರಿನಲ್ಲಿ ನೆನೆಸಿಡಿ. ಬಾಣಲೆಗೆ ತುಪ್ಪ ಮತ್ತು ಎಣ್ಣೆ ಹಾಕಿ ಬಿಸಿ ಮಾಡಿ. ಪನೀರ್ ತುಂಡುಗಳನ್ನು ಹಾಕಿ ಸ್ವಲ್ಪ ಕೆಂಪಾಗುವವರೆಗೆ ಹುರಿದು ಬದಿಗಿರಿಸಿ.

ಈಗ ಅದೇ ಬಾಣಲೆಗೆ ಚಕ್ಕೆ, ಏಲಕ್ಕಿ, ಲವಂಗ, ಪಲಾವ್ ಎಲೆ ಹಾಗೂ ಈರುಳ್ಳಿ ಹಾಕಿ ಹುರಿದುಕೊಳ್ಳಿ. ನಂತರ ಹಸಿಮೆಣಸು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಕ್ಯಾರೆಟ್ ಹಾಕಿ ಒಂದು ನಿಮಿಷ ಹುರಿಯಿರಿ. ಅಗತ್ಯವಿರುವಷ್ಟು ನೀರು, ಉಪ್ಪು ಸೇರಿಸಿ ಕುದಿಸಿ. ನಂತರ ಅಕ್ಕಿ, ಹುರಿದ ಪನೀರ್, ಕೊತ್ತಂಬರಿ ಮತ್ತು ಪುದಿನ ಸೊಪ್ಪು ಹಾಕಿ ಕುಕ್ಕರ್ ಮುಚ್ಚಿ 2 ವಿಶಲ್ ಬರುವವರೆಗೆ ಬೇಯಿಸಿ.

error: Content is protected !!