October 19, 2026
Monday, October 19, 2026
spot_img

ಅಮೆರಿಕ-ಇಸ್ರೇಲ್ ದಾಳಿಗೆ ಇರಾನ್ ಶಾಲಾ ಬಾಲಕಿಯರು ಬಲಿ: ಸ್ಮಶಾನದಲ್ಲಿ ನಡೆಯಿತು ಸಾಮೂಹಿಕ ಅಂತ್ಯಕ್ರಿಯೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಇರಾನ್ ವಿರುದ್ಧದ ಅಮೆರಿಕ- ಇಸ್ರೇಲ್ ದಾಳಿಯಿಂದಾಗಿ 160 ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿದ್ದಾರೆ. ಕುಟುಂಬಸ್ಥರು ತಮ್ಮ ಮಕ್ಕಳ ಅಂತ್ಯಕ್ರಿಯೆನ್ನು ಸಾಮೂಹಿಕವಾಗಿ ನೆರವೇರಿಸಿದ್ದಾರೆ.

ಅಂತ್ಯಕ್ರಿಯೆ ಮೊದಲು ಮೃತರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಮೆರವಣಿಗೆ ಇಂದು ನಡೆಯಿತು. ಜನಸಾಗರವೇ ಹರಿದುಬಂದಿತ್ತು.

ಬಳಿಕ ಸ್ಮಶಾನದಲ್ಲಿ ಜೆಸಿಬಿಯಿಂದ ನೂರಾರು ಸ್ಮಶಾನ ಗುಂಡಿಗಳನ್ನು ತೆರೆಯಾಗಿತ್ತು. ಗುಂಡಿ ಮುಂದೆ ಮೃತದೇಹ ಇಟ್ಟುಕೊಂಡು ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ. ಬಳಿಕ ಸಾಮೂಹಿಕ ಅಂತ್ಯಕ್ರಿಯೆ ನಡೆಸಿದ್ದಾರೆ.

ದಕ್ಷಿಣ ಇರಾನ್‌ನ ಮಿನಾಬ್ ಪಟ್ಟಣದ ಶಜರೆಹ್ ತಯೆಬೆಹ್ ಬಾಲಕಿಯರ ಪ್ರಾಥಮಿಕ ಶಾಲೆ ಮೇಲೆ ಫೆ.28 ರಂದು ದಾಳಿ ನಡೆಸಲಾಗಿತ್ತು.

ಅಮೆರಿಕ, ಇಸ್ರೇಲ್ ನ ಈ ಮಿಲಿಟರಿ ದಾಳಿ ಬಗ್ಗೆ UNESCO ತೀವ್ರ ಕಳವಳ ವ್ಯಕ್ತಪಡಿಸಿದೆ. ಅಂತಾರಾಷ್ಟ್ರೀಯ ಮಾನವೀಯ ಕಾನೂನಿನ ಅಡಿಯಲ್ಲಿ ವಿದ್ಯಾರ್ಥಿಗಳನ್ನು ರಕ್ಷಿಸಬೇಕಾಗಿದೆ. ಶಿಕ್ಷಣ ಸಂಸ್ಥೆಗಳ ವಿರುದ್ಧದ ದಾಳಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಅಪಾಯವನ್ನುಂಟುಮಾಡುತ್ತವೆ ಮತ್ತು ಶಿಕ್ಷಣದ ಹಕ್ಕನ್ನು ಹಾಳುಮಾಡುತ್ತವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಯುನೆಸ್ಕೋ ಹೇಳಿಕೆ ಬಿಡುಗಡೆ ಮಾಡಿದೆ.

Must Read