Friday, November 21, 2025

ನಕ್ಸಲರು ಅಡಗಿಸಿಟ್ಟಿದ್ದ 5 ಐಇಡಿ ಸೇರಿ ಅಪಾರ ಪ್ರಮಾಣದ ಸ್ಫೋಟಕ ಸೀಜ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಭದ್ರತಾ ಪಡೆ ಹಾಗೂ ಬಿಜಾಪುರ ಪೊಲೀಸರು ನಡೆಸಿದ ಜಂಟಿ ಕಾರ್ಯಚರಣೆಯಲ್ಲಿ ನಕ್ಸಲರು ಅಡಗಿಸಿಟ್ಟಿದ್ದ ಅಪಾರ ಪ್ರಮಾಣದ ಸ್ಫೋಟಕ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಸೋಮವಾರ ಮಧ್ಯಾಹ್ನ 3ರ ಸುಮಾರಿಗೆ ತಡ್ಪಲ ಬೇಸ್ ಕ್ಯಾಂಪ್‌ನ ಕೋಬ್ರಾ 206, ಸಿಆರ್‌ಪಿಎಫ್ 229, 153 ಮತ್ತು 196 ಮತ್ತು ಬಿಜಾಪುರ ಪೊಲೀಸರು ಕೆಜಿಹೆಚ್ ತಪ್ಪಲಿನ ಪ್ರದೇಶದಲ್ಲಿ ಜಂಟಿ ಕಾರ್ಯಚರಣೆ ನಡೆಸಿದ್ದಾರೆ. ಈ ವೇಳೆ ನಕ್ಸಲರು ಅಡಗಿಸಿಟ್ಟಿದ್ದ ಅಪಾರ ಪ್ರಮಾಣದ ಸ್ಫೋಟಕ ವಸ್ತುಗಳು ಪತ್ತೆಯಾಗಿದ್ದು, 51 ಜೀವಂತ ಬಿಜಿಎಲ್‌ಗಳು, 100 ಬಂಡಲ್‌ಗಳ ಹೆಚ್‌ಟಿ ಅಲ್ಯೂಮಿನಿಯಂ ತಂತಿ, 50 ಸ್ಟೀಲ್ ಪೈಪ್‌ಗಳು, ಬಿಜಿಎಲ್ ನಿರ್ಮಾಣಕ್ಕಾಗಿ ದೊಡ್ಡ ಪ್ರಮಾಣದ ವಿದ್ಯುತ್ ತಂತಿ, 20 ಕಬ್ಬಿಣದ ಹಾಳೆಗಳು ಮತ್ತು 40 ಕಬ್ಬಿಣದ ತಟ್ಟೆಗಳನ್ನು ವಶಪಡಿಸಿಕೊಂಡಿದ್ದಾರೆ.

error: Content is protected !!