ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ರಸ್ತೆ ಗುಂಡಿ, ಕಸ ಅದ್ವಾನ ಸಂಬಂಧಪಟ್ಟಂತೆ ಉದ್ಯಮಿ ಕಿರಣ್ ಮಜುಂದಾರ್ ಶಾ ರಾಜ್ಯ ಸರ್ಕಾರದ ವಿರುದ್ಧ ಮತ್ತೆ ಕಿಡಿಕಾರಿದ್ದಾರೆ.
ನಗರದ ಅದ್ವಾನದ ಬಗ್ಗೆ ಚೀನಾ ಉದ್ಯಮಿಯೊಬ್ಬರು ಕೇಳಿದ ಪ್ರಶ್ನೆಗಳನ್ನ ಉಲ್ಲೇಖಿಸಿ ಸರ್ಕಾರದ ವಿರುದ್ಧ ಎಕ್ಸ್ ಖಾತೆ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಯೋಕಾನ್ ಪಾರ್ಕ್‌ಗೆ ಚೀನಾದಿಂದ ವಿದೇಶಿ ಉದ್ಯಮಿಯೊಬ್ಬರು ಭೇಟಿ ನೀಡಿದ್ದರು. ಈ ವೇಳೆ ಹದಗೆಟ್ಟ ರಸ್ತೆ, ಕಸದ ಬಗ್ಗೆ ನನ್ನ ಪ್ರಶ್ನಿಸಿದ್ರು. ರಸ್ತೆಗಳು ಏಕೆ ಇಷ್ಟು ಕೆಟ್ಟದಾಗಿವೆ? ಇಷ್ಟೊಂದು ಕಸ ಏಕೆ ಇದೆ? ಹೂಡಿಕೆಯನ್ನು ಬೆಂಬಲಿಸಲು ಸರ್ಕಾರ ಬಯಸುವುದಿಲ್ಲವೇ? ಉತ್ತಮ ಗಾಳಿ ಇರುವ ಭಾರತವು ಏಕೆ ಕ್ರಮವನ್ನು ಕೈಗೊಳ್ಳುತ್ತಿಲ್ಲ? ಅಂತಾ ಪ್ರಶ್ನಿಸಿದರೆಂದು ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.
ಕಿರಣ್ ಮಜುಂದಾರ್ ಶಾ ಟ್ವೀಟ್‌ಗೆ ಸಚಿವ ಎಂಬಿ ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ 1,000 ಕೋಟಿ ವೆಚ್ಚದಲ್ಲಿ ಗುಂಡಿಗಳನ್ನು ಮುಚ್ಚುತ್ತಿದ್ದೇವೆ. ಮಜಂದೂರ್ ಶಾ ಈ ಮಾತು ಆಡುವ ಅವಶ್ಯಕತೆ ಇರಲಿಲ್ಲ. ಪದೇ ಪದೇ ಮಾತಾಡ್ತಿರುವ ಉದ್ದೇಶ ಆದರೂ ಏನು? ಅಂತ ಪ್ರಶ್ನಿಸಿದ್ದಾರೆ.