ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಸ್ರೇಲ್-ಹಮಾಸ್ ಯುದ್ಧವನ್ನು ಕೊನೆಗೊಳಿಸುವ ಐತಿಹಾಸಿಕ ಶಾಂತಿ ಒಪ್ಪಂದ ಅತ್ತ ನಡೆಯುತ್ತಿದ್ದರೆ, ಜೊತೆಗೆ ಕದನ ವಿರಾಮ ಒಪ್ಪಂದ ಮತ್ತು ಗಾಜಾದಲ್ಲಿ ಜನಾಂಗೀಯ ಹತ್ಯೆಯ ಯುದ್ಧ ಕೊನೆಗೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದೇ ಪದೇ ಭರವಸೆ ನೀಡುತ್ತಿದ್ದರೆ , ಇತ್ತ ಮಂಗಳವಾರ ಗಾಜಾದಾದ್ಯಂತ ನಡೆದ ಪ್ರತ್ಯೇಕ ದಾಳಿಗಳಲ್ಲಿ ಇಸ್ರೇಲ್ ಕನಿಷ್ಠ ಒಂಬತ್ತು ಪ್ಯಾಲೆಸ್ತೇನಿಯನ್ನರನ್ನು ಕೊಂದಿದೆ ಮತ್ತು ಹಲವಾರು ಜನರನ್ನು ಗಾಯಗೊಳಿಸಿದೆ ಎಂದು ಅಲ್ ಜಜೀರಾ ವರದಿ ಮಾಡಿದೆ.
ಇಸ್ರೇಲಿ ಸೇನಾಪಡೆ ಪ್ಯಾಲೆಸ್ಟೀನಿಯನ್ನರ ಮೇಲೆ ಗುಂಡು ಹಾರಿಸಿದ್ದರಿಂದ ಗಾಜಾ ನಗರದ ಶುಜಾಯೆಯಾ ನೆರೆಹೊರೆಯಲ್ಲಿ ಕನಿಷ್ಠ ಐದು ಜನರು ಸಾವನ್ನಪ್ಪಿದ್ದಾರೆ.
ಇಸ್ರೇಲಿ ಮಿಲಿಟರಿ X ನಲ್ಲಿ ಪೋಸ್ಟ್ ಮಾಡಿದ್ದು, ಪ್ಯಾಲೆಸ್ಟೀನಿಯನ್ನರು ‘ಹಳದಿ ರೇಖೆ’ಯನ್ನು ದಾಟಿ ಸೈನಿಕರನ್ನು ಸಮೀಪಿಸಿದ್ದಾರೆ, ಇದೇ ಕಾರಣಕ್ಕಾಗಿ ಗುಂಡಿಕ್ಕಲಾಗಿದೆ ಎಂದು ಸಮರ್ಥಿಸಿದೆ.
ಅಲ್ ಜಜೀರಾ ಗಾಜಾದ ಖಾನ್ ಯೂನಿಸ್‌ನಲ್ಲಿ ಇಸ್ರೇಲಿ ಡ್ರೋನ್ ದಾಳಿಗಳನ್ನು ಸಹ ವರದಿ ಮಾಡಿದೆ, ಇದು ಅನೇಕ ಸಾವುನೋವುಗಳಿಗೆ ಕಾರಣವಾಗಿದೆ ಎಂದು ನಂಬಲಾಗಿದೆ.
ಪ್ಯಾಲೆಸ್ತೇನಿಯನ್ ಪತ್ರಕರ್ತೆ ಸಲೇಹ್ ಅಲ್ಜಫರಾವಿ ಅವರನ್ನು ಇಸ್ರೇಲ್‌ನೊಂದಿಗೆ ಸಂಬಂಧ ಹೊಂದಿದ್ದಾರೆಂದು ಹೇಳಲಾದ ಸಶಸ್ತ್ರ ಮಿಲಿಟಿಯಾ ಗುಂಡು ಹಾರಿಸಿ ಕೊಂದ ಕೆಲವು ದಿನಗಳ ನಂತರ ಈ ಹತ್ಯೆಗಳು ಸಂಭವಿಸಿವೆ ಎಂದು ಗಾಜಾದ ಆಂತರಿಕ ಸಚಿವಾಲಯ ತಿಳಿಸಿದೆ.