September 28, 2026
Monday, September 28, 2026
spot_img

ಒಂದು ವಾರ ಅಷ್ಟೇ ಟೈಮ್, ನಮ್ಮವರನ್ನು ನಮಗೆ ಒಪ್ಪಿಸಿ! ಪಾಕ್‌ಗೆ ಖಡಕ್‌ ಎಚ್ಚರಿಕೆ ಕೊಟ್ಟ BLA

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಪಾಕಿಸ್ತಾನದ ಭದ್ರತಾ ಪಡೆಯ ಏಳು ಸಿಬ್ಬಂದಿಯನ್ನು ತಮ್ಮ ವಶದಲ್ಲಿಟ್ಟಿರುವುದಾಗಿ ಘೋಷಿಸಿದೆ. ಬಂಧಿತರ ಬಿಡುಗಡೆಗಾಗಿ ಕೈದಿಗಳ ವಿನಿಮಯ ಒಪ್ಪಂದಕ್ಕೆ ಒಂದು ವಾರದ ಗಡುವು ನೀಡಲಾಗಿದೆ. ನಿಗದಿತ ಅವಧಿಯೊಳಗೆ ಮಾತುಕತೆ ನಡೆಯದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಂಘಟನೆ ಎಚ್ಚರಿಸಿದೆ.

ಸಂಘಟನೆಯ ಮಾಧ್ಯಮ ವಿಭಾಗ ಹೊರಡಿಸಿದ ಹೇಳಿಕೆಯಲ್ಲಿ, ‘ಆಪರೇಷನ್ ಹೆರೋಫ್’ ಎರಡನೇ ಹಂತದ ವೇಳೆ ಒಟ್ಟು 17 ಮಂದಿ ಭದ್ರತಾ ಸಿಬ್ಬಂದಿಯನ್ನು ವಿವಿಧ ಪ್ರದೇಶಗಳಲ್ಲಿ ಬಂಧಿಸಲಾಗಿದೆ ಎಂದು ತಿಳಿಸಲಾಗಿದೆ. ಅವರಲ್ಲಿ 10 ಮಂದಿ ಸ್ಥಳೀಯ ಬಲೂಚ್ ಮೂಲದವರಾಗಿದ್ದು, ಎಚ್ಚರಿಕೆ ನೀಡಿ ಬಿಡುಗಡೆ ಮಾಡಲಾಗಿದೆ ಎಂದು ಬಿಎಲ್‌ಎ ಹೇಳಿದೆ.

ಇದನ್ನೂ ಓದಿ:

ಉಳಿದ ಏಳು ಮಂದಿ ಪಾಕಿಸ್ತಾನ ಸೇನೆಗೆ ಸೇರಿದವರು ಎಂದು ಸಂಘಟನೆ ಆರೋಪಿಸಿದೆ. ಇವರನ್ನು ‘ಬಲೂಚ್ ರಾಷ್ಟ್ರೀಯ ನ್ಯಾಯಾಲಯ’ದ ಮುಂದೆ ವಿಚಾರಣೆ ನಡೆಸಲಾಗಿದೆ ಎಂದು ಹೇಳಿಕೆ ತಿಳಿಸುತ್ತದೆ. ನಾಗರಿಕರ ವಿರುದ್ಧ ಕ್ರಮಗಳಲ್ಲಿ ಭಾಗಿಯಾದ ಆರೋಪಗಳನ್ನು ಅವರು ಎದುರಿಸುತ್ತಿದ್ದಾರೆ ಎಂಬುದಾಗಿ ಬಿಎಲ್‌ಎ ಹೇಳಿದೆ.

ಈ ಬೆಳವಣಿಗೆ ಕುರಿತು ಪಾಕಿಸ್ತಾನ ಸರ್ಕಾರ ಅಥವಾ ಸೇನೆ ಇನ್ನೂ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಳ್ಳುವ ಸಾಧ್ಯತೆ ಇದೆ.

Must Read