ಹೊಸದಿಗಂತ ಡಿಜಿಟಲ್ ಡೆಸ್ಕ್:
ಆರ್‌ಎಸ್‌ಎಸ್ ಚಟುವಟಿಕೆಗಳನ್ನು ರಾಜ್ಯದಲ್ಲಿ ನಿಷೇಧಿಸಬೇಕೆಂಬ ಕಾಂಗ್ರೆಸ್ ಮುಖಂಡ ಪ್ರಿಯಾಂಕ್ ಖರ್ಗೆ ಅವರ ಮನವಿಗೆ ಶಾಸಕ ಆರಗ ಜ್ಞಾನೇಂದ್ರ ವ್ಯಂಗ್ಯವಾಡಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ, ಆರ್‌ಎಸ್‌ಎಸ್ ಅನ್ನು ನಿಷೇಧಿಸಲು ಪ್ರಿಯಾಂಕ್ ಖರ್ಗೆ ಮಾಡುತ್ತಿರುವ ಪ್ರಯತ್ನಗಳನ್ನು ಫಲಿಸಲ್ಲ. ಆರ್‌ಎಸ್‌ಎಸ್ ಕಳೆದ ನೂರು ವರ್ಷಗಳಿಂದ ದೇಶಭಕ್ತರನ್ನು ನಿರ್ಮಿಸುತ್ತಿದೆ. ನೆಹರೂ- ಇಂದಿರಾ ಕಾಲದಲ್ಲಿ ತುರ್ತು ಪರಿಸ್ಥಿತಿ ಹೇರಿ ಕತ್ತು ಹಿಸುಕಿದಾಗಲೂ ಆರ್‌ಎಸ್‌ಎಸ್ ಬೆಳೆದಿದೆ. ಈಗಲೂ ಬೆಳೆಯುತ್ತಿದೆ ಎಂದರು.
ಕೇಂದ್ರದಲ್ಲಿ ಅಧಿಕಾರದಲ್ಲಿರೋರು ಕೂಡ ಆರ್‌ಎಸ್‌ಎಸ್ ನ ಸ್ವಯಂಸೇವಕರು. ಇದನ್ನ ಮರಿಬೇಡಿ. ಆರ್‌ಎಸ್‌ಎಸ್ ನ ಕೈಗೆ ದೇಶ ಕೊಟ್ಟರೆ ಎನಾಗುತ್ತೆ ಎಂದು ಮೋದಿ 10 ವರ್ಷದಲ್ಲಿ ತೋರಿಸಿದ್ದಾರೆ. ಆದ್ದರಿಂದ ಸಂಘವನ್ನು ನಿಷೇಧಿಸುವುದು ಸಾಧ್ಯವಿಲ್ಲ ಎಂದು ಹೇಳಿದರು. ಅವರು ದೇಶದ ರಾಜಕೀಯ ಪರಿಸ್ಥಿತಿಯನ್ನು ಉಲ್ಲೇಖಿಸಿ, ರಾಜ್ಯದಲ್ಲಿ ಕೆಲವು ಜನರ ಅಸಹನೆಯು ಹೆಚ್ಚಾಗಿದ್ದು, ದೇಶಭಕ್ತರ ಧಮನಕ್ಕೆ ಯತ್ನಿಸಲಾಗುತ್ತಿದೆ ಎಂಬ ಆರೋಪವನ್ನು ಮಾಡಿದರು.