April 19, 2026
Sunday, April 19, 2026
spot_img

ಹೊಟೇಲ್‌ಗಳಿಗೆ ಹತ್ತು ದಿನ ಗ್ಯಾಸ್‌ ಸಮಸ್ಯೆ ಆಗಬಹುದು, ಸ್ವಲ್ಪ ಅಡ್ಜಸ್ಟ್‌ ಮಾಡ್ಕೋಬೇಕು: ಮುನಿಯಪ್ಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಗ್ಯಾಸ್‌ ಸಿಲಿಂಡರ್‌ ಸಪ್ಲೇ ಇಲ್ಲ ಎಂದು ಹೊಟೇಲ್‌ಗಳು ಮುಚ್ಚುತ್ತಿವೆ, ಕೆಲವು ಹೊಟೇಲ್‌ಗಳಲ್ಲಿ ಕಡಿಮೆ ಗ್ಯಾಸ್‌ನಲ್ಲಿ ಮಾಡಬಹುದಾದ ಪದಾರ್ಥಗಳು ಮಾತ್ರ ಸಿಗುತ್ತಿವೆ. ಈ ಸಮಸ್ಯೆ ಹತ್ತು ದಿನ ಇರಬಹುದಷ್ಟೇ ಎಂದು ಸಚಿವ ಮುನಿಯಪ್ಪ ಹೇಳಿದ್ದಾರೆ.

ಹೋಟೆಲ್‌ಗಳಿಗೆ ಕಮರ್ಷಿಯಲ್ ಗ್ಯಾಸ್ ಒಂದು ವಾರ, 10 ದಿನ ಸಮಸ್ಯೆ ಆಗಬಹುದು. ಅಲ್ಲಿವರೆಗೂ ಹೋಟೆಲ್‌ಗಳು ಸಹಿಸಿಕೊಳ್ಳಬೇಕು ಎಂದಿದ್ದಾರೆ.

ರಾಜ್ಯದಲ್ಲಿ ಗ್ಯಾಸ್ ಸಮಸ್ಯೆ ಬಗ್ಗೆ ಕಾಂಗ್ರೆಸ್ ಸದಸ್ಯರಾದ ಐವಾನ್ ಡಿಸೋಜ ಮತ್ತು ನಾಗರಾಜ್ ಯಾದವ್ ಈ ಬಗ್ಗೆ ಮಾತನಾಡಿದ್ದು, ಆಟೋ, ಹೋಟೆಲ್‌ಗಳಿಗೆ ಗ್ಯಾಸ್ ಸಿಕ್ತಿಲ್ಲ. ಗ್ಯಾಸ್ ಕಾಳಸಂತೆಯಲ್ಲಿ ಮಾರಾಟ ಆಗ್ತಿದೆ. ಹೋಟೆಲ್‌ನಲ್ಲಿ ತಿಂಡಿ, ಊಟ ಸಮಸ್ಯೆ ಆಗ್ತಿದೆ. ಗ್ಯಾಸ್ ರೇಟ್ ಏರಿಕೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಸುದ್ದಿ ಆಗ್ತಿದೆ. ಈ ಬಗ್ಗೆ ತನಿಖೆ ಆಗಬೇಕು ಅಂತ ಮನವಿ ಮನವಿ ಮಾಡಿದ್ದಾರೆ.

ಇದಕ್ಕೆ ಸಚಿವ ಮುನಿಯಪ್ಪ ಉತ್ತರ ನೀಡಿ, ಇಂದು ಕೂಡ ಆಯಿಲ್ ಕಂಪನಿ ಜೊತೆ ಮಾತುಕತೆ ಮಾಡಿದ್ದೇನೆ. ಆಸ್ಪತ್ರೆ, ಹಾಸ್ಟೆಲ್, ವಸತಿ ನಿಲಯಕ್ಕೆ ಕಮರ್ಷಿಯಲ್ ಗ್ಯಾಸ್ ಕೊಡ್ತೀವಿ. ಈಗ ತಕ್ಷಣಕ್ಕೆ ಸಮಸ್ಯೆ ಆಗಿದೆ. ಒಂದು ವಾರದಲ್ಲಿ ಸಮಸ್ಯೆ ಪರಿಹಾರ ಆಗಲಿದೆ. ಹೋಟೆಲ್ ಅವರಿಗೆ ಎಲೆಕ್ಟ್ರಿಕ್ ಸ್ಟೌವ್ ಬಳಕೆ ಮಾಡಿ ಅಂತ ಮನವಿ ಮಾಡಿದ್ದೇವೆ. ಹೋಟೆಲ್ ಅವರು ಒಂದು ವಾರ ಸಹಿಸಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !