Wednesday, October 22, 2025

Read It | ಈ ವಸ್ತುಗಳು ನಿಮ್ಮ ಬಳಿ ಇದ್ರೆ ಹಾವುಗಳು ಮನೆಯ ಹತ್ತಿರ ಬರೋದಿಲ್ಲ

ಒಬ್ಬ ವ್ಯಕ್ತಿ ಎಷ್ಟೇ ಧೈರ್ಯಶಾಲಿಯಾಗಿದ್ದರೂ, ಮನೆಯೊಳಗೆ ಅಥವಾ ತೋಟದಲ್ಲಿ ಹಾವು ಕಂಡಾಗ ಸ್ವಾಭಾವಿಕವಾಗಿ ಭಯ ಉಂಟಾಗುತ್ತದೆ. ಈ ಹಾವುಗಳು ಬರೋದನ್ನು ತಡೆಯೋಕೇ ಕೆಲವು ಸರಳ ವಿಧಾನಗಳನ್ನು ಅನುಸರಿಸುವ ಮೂಲಕ, ಹಾವಿನಿಂದ ಮುಕ್ತ ವಾತಾವರಣವನ್ನು ಸೃಷ್ಟಿಸಬಹುದು.

  • ನೆಫ್ಥಲೀನ್ ಬಳಸಿ: ನೆಫ್ಥಲೀನ್ ಹಾವುಗಳಿಗೆ ಅಸಹ್ಯವಾಗುವ ಬಲವಾದ ವಾಸನೆಯೊಂದಿಗೆ ಬರುತ್ತದೆ. ನಾಲ್ಕರಿಂದ ಐದು ಉಂಡೆಗಳನ್ನು ಪುಡಿಮಾಡಿ, ಒಂದರಿಂದ ಎರಡು ಕಪ್ ನೀರಿನೊಂದಿಗೆ ಮಿಶ್ರಣ ತಯಾರಿಸಿ, ಮರಗಳು, ಸಸ್ಯಗಳು ಮತ್ತು ಮನೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಿಂಪಡಿಸಿದರೆ, ಹಾವುಗಳು ಮನೆಯೊಳಗೆ ಪ್ರವೇಶಿಸಲು ಸಾಧ್ಯವಿಲ್ಲ. ಬಾಗಿಲಿನ ಮೇಲೆಯೂ ಮಿಶ್ರಣವನ್ನು ಹಾಕುವುದು ಉತ್ತಮ. ಮಕ್ಕಳಿಗೆ ಮುಟ್ಟದಂತೆ ನೋಡಿಕೊಳ್ಳುವುದು ಅನಿವಾರ್ಯ.
  • ಅಮೋನಿಯಾದಿಂದ ಹಾವುಗಳನ್ನು ತಡೆಯಬಹುದು: ಅಮೋನಿಯಾ ಕೂಡ ಹಾವುಗಳಿಗೆ ಅಸಹ್ಯ ವಾಸನೆ ನೀಡುತ್ತದೆ. ಎರಡರಿಂದ ಮೂರು ಚಮಚ ಅಮೋನಿಯಾ ಮತ್ತು ಒಂದು ಅಥವಾ ಎರಡು ಕಪ್ ನೀರನ್ನು ಬೆರೆಸಿ, ಸ್ಪ್ರೇ ಬಾಟಲಿಯಲ್ಲಿ ತುಂಬಿ ಸುತ್ತಮುತ್ತಲಿನ ಸಸ್ಯಗಳು, ಮರಗಳು ಮತ್ತು ಹೂವಿನ ಮೇಲೆ ಸಿಂಪಡಿಸಿದರೆ ಹಾವುಗಳು ಬರುವುದಿಲ್ಲ.
  • ಲವಂಗ ಮತ್ತು ದಾಲ್ಚಿನ್ನಿ ಎಣ್ಣೆ ಬಳಸಿ: ಲವಂಗ ಮತ್ತು ದಾಲ್ಚಿನ್ನಿ ಎಣ್ಣೆಯ ಬಲವಾದ ವಾಸನೆಯಿಂದ ಹಾವುಗಳು ಬರುವುದಿಲ್ಲ. ಎರಡು ಟೀ ಚಮಚ ಎಣ್ಣೆಗಳನ್ನು ಮೂರು ಕಪ್ ನೀರಿನಲ್ಲಿ ಬೆರೆಸಿ, ತೋಟದಲ್ಲಿ ಸಸ್ಯಗಳ ಮೇಲೆ ಸಿಂಪಡಿಸಿದರೆ ಹಾವುಗಳು ದೂರ ಉಳಿಯುತ್ತವೆ. ಈ ಪದ್ದತಿಯನ್ನು ಬಳಸಿದರೆ, ಮಳೆಗಾಲದಲ್ಲಿಯೂ ತೋಟದಲ್ಲಿ ಕೀಟಗಳ ಸಮಸ್ಯೆ ಕಡಿಮೆಯಾಗುತ್ತದೆ. ಬದಲಾಗಿ ಈರುಳ್ಳಿ ಅಥವಾ ಬೆಳ್ಳುಳ್ಳಿ ಎಣ್ಣೆಯನ್ನೂ ಬಳಸಬಹುದು.
  • ಸಲ್ಫರ್ ಪುಡಿ ಮಿಶ್ರಣ: ಸಲ್ಫರ್ ಪುಡಿಯ ಮಿಶ್ರಣವನ್ನು ಸಸ್ಯಗಳ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮೇಲೆ ಸಿಂಪಡಿಸಿದರೆ ಹಾವುಗಳು ದೂರ ಉಳಿಯುತ್ತವೆ. ಜೊತೆಗೆ, ವಿನೆಗರ್, ನಿಂಬೆ ಹಾಗೂ ಅಡಿಗೆ ಸೋಡಾದ ಮಿಶ್ರಣವನ್ನು ಕೂಡ ಹಾವು ನಿರೋಧಕವಾಗಿ ಬಳಸಬಹುದು. (Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ.)
error: Content is protected !!