Saturday, November 8, 2025

ದಿನಭವಿಷ್ಯ: ಇಂದು ಉತ್ಸಾಹದ ದಿನ, ಹಣಕಾಸಿನ ಬಿಕ್ಕಟ್ಟು ಪರಿಹಾರ ಆಗುವುದು

ಮೇಷ.
ವೃತ್ತಿಯಲ್ಲಿ ಅಸಹಾಯಕ ಸನ್ನಿವೇಶ ಎದುರಾದೀತು. ಮನೆಯಲ್ಲಿ ಕೂಡಾ ನೆಮ್ಮದಿಗೆ ಭಂಗ. ಸಹನೆ, ಹೊಂದಾಣಿಕೆ ಮುಖ್ಯ.
ವೃಷಭ
ಉತ್ಸಾಹದ ದಿನ. ನಿಮ್ಮ ಸೂರ್ತಿಯುತ ಕಾರ್ಯ ಯಶಸ್ಸು ತರುವುದು. ಮನೆಯಲ್ಲಿ ಭಿನ್ನಮತ ನಿವಾರಣೆ. ಆದರಾತಿಥ್ಯ ಲಭ್ಯ.
ಮಿಥುನ
ದೀರ್ಘಕಾಲೀನ ಹಣಕಾಸು ಬಿಕ್ಕಟ್ಟು ಇಂದು ಪರಿಹಾರ ಆಗುವ ಸಾಧ್ಯತೆಯಿದೆ. ಆರ್ಥಿಕ ಸಮಸ್ಯೆಗಳನ್ನು ತಕ್ಷಣವೆ ಪರಿಹರಿಸಿ. ಚಿಂತೆ ವಿಮುಕ್ತಿ.  
ಕಟಕ
ಇತರರ ಸಲಹೆ ಗಳಿಗೆ ಕಿವಿಗೊಡಿ. ಮುಂದೆ ಒಳಿತಾಗಲಿದೆ. ಎಲ್ಲರನ್ನು ತಕ್ಷಣಕ್ಕೆ ತಿರಸ್ಕರಿಸಬೇಡಿ. ಕೌಟುಂಬಿಕ ಸಹಕಾರ ಲಭಿಸುವುದು.
ಸಿಂಹ
ಎಲ್ಲರೊಂದಿಗೆ ಬೆರೆಯಿರಿ. ಸಮಸ್ಯೆಗೆ ಹೆದರಿ ಕೊರಗುತ್ತಾ ಕೂರದಿರಿ. ಮನಸ್ಸಿನ ತಾಕಲಾಟಕ್ಕೆ ಇತರರಿಂದ ಪರಿಹಾರ ಸಿಗಬಹುದು.
ಕನ್ಯಾ
ಸಾಧಾರಣವಾಗಿ ಶಾಂತಚಿತ್ತರಾದ ನೀವು ಇಂದು ಸಹನೆ ಕಳಕೊಳ್ಳುವ ಪ್ರಸಂಗ ಒದಗೀತು. ಇತರರಿಗೆ ನಿಮ್ಮ ವರ್ತನೆ ಅಚ್ಚರಿ ತರಬಹುದು.
ತುಲಾ
ಚಿಂತೆ, ಆತಂಕಗಳು ಇಂದು ಕಾಡುವವು. ಸಮಸ್ಯೆಯ ಆಳಕ್ಕಿಳಿದು ಪರಿಹಾರ ಕಂಡುಕೊಳ್ಳಿ. ಬೇರೆಲ್ಲೋ ಪರಿಹಾರ ಸಿಗಬಹುದು.  
ವೃಶ್ಚಿಕ
ಮಾತಿನಿಂದಲೆ ಎಲ್ಲರನ್ನು ಗೆಲ್ಲುವಿರಿ. ನಿಮ್ಮ ಕೆಲಸದ ವೇಗವೂ ಹೆಚ್ಚುವುದು. ಆರೋಗ್ಯ ಸಮಸ್ಯೆ ಕಂಡರೆ ನಿರ್ಲಕ್ಷಿಸಬೇಡಿ.    
ಧನು
ದೈನಂದಿನ ಕಾರ್ಯದಿಂದ ರೋಸಿ ಹೋದೀತು. ಭಿನ್ನತೆ ಪಡೆಯಲು ಬಯಸು ವಿರಿ. ಹೊಸತನಕ್ಕೆ ತುಡಿಯುವಿರಿ.  
ಮಕರ
ವೃತ್ತಿಯಲ್ಲಿ ನಿಮ್ಮ ಪ್ರತಿಸ್ಪಽಗಳ ಕುರಿತು ಎಚ್ಚರದಿಂದಿರಬೇಕು. ಅವರಿಂದ ಪ್ರತಿಕೂಲ ಸನ್ನಿವೇಶ ಸೃಷ್ಟಿಯಾದೀತು. ಅದನ್ನು ನಿಭಾಯಿಸಿರಿ.
ಕುಂಭ
ಕಾರ್ಯದಲ್ಲಿ ಸಫಲತೆ ಸಿಗಬೇಕಾದರೆ ಆ ಕುರಿತಾದ ಜ್ಞಾನವನ್ನು ಮೊದಲು ಹೆಚ್ಚಿಸಿಕೊಳ್ಳಿ. ಆತುರದ ನಿರ್ಧಾರ ಬೇಡ. ಸಮಾಲೋಚನೆ ಒಳಿತು.
 ಮೀನ
ಅನಿರೀಕ್ಷಿತವಾದುದು ಸಂಭವಿಸಬಹುದು. ನಿಮಗೆ ಪ್ರತಿಕೂಲವಾಗಿದ್ದರೆ ಅದರಿಂದ ದೂರವಿರಿ. ವೃಥಾ ವಿವಾದದಲ್ಲಿ ಸಿಲುಕಲು ಹೋಗದಿರಿ.

error: Content is protected !!