Saturday, December 9, 2023

Latest Posts

ದಿನಭವಿಷ್ಯ: ಖಾಸಗಿ ಬದುಕಲ್ಲಿ ಸಮಸ್ಯೆ ಎದುರಿಸುವಿರಿ, ಪ್ರತಿಯೊಂದು ನಡೆನುಡಿಯಲ್ಲೂ ಎಚ್ಚರ ವಹಿಸಿ..

ಮೇಷ
ನಿಮ್ಮ ಕಾರ್ಯಕ್ಕೆ ಕುಟುಂಬಸ್ಥರ  ಅಸಹಕಾರ. ಕೆಲವರಿಗೆ ನಿಮ್ಮ ಕುರಿತು ವಿನಾಕಾರಣ ಮುನಿಸು. ಸಮಾಧಾನದಿಂದ ವ್ಯವಹರಿಸಿರಿ.

ವೃಷಭ
ದೊಡ್ಡ ಸಮಸ್ಯೆ ಇರದಿದ್ದರೂ ಸಮಸ್ಯೆಯ ಭಾರ ಹೊತ್ತಂತೆ  ವರ್ತಿಸುವಿರಿ. ಎಲ್ಲರ ಹೊಣೆ ನಿಮ್ಮದೇ ಎಂಬಂತೆ ಭಾವಿಸುವಿರಿ. ಹಗುರಾಗಿ ಚಿಂತಿಸಿ.

ಮಿಥುನ
ವೃತ್ತಿಯಲ್ಲಿ ನಿಮಗೆ ಅನುಕೂಲಕರ  ಬೆಳವಣಿಗೆ.  ಕೌಟುಂಬಿಕ ವಿಚಾರದಲ್ಲಿ ಮಾತ್ರ ಅಸಮಾಧಾನ ಉಂಟಾಗುವ ಪ್ರಸಂಗ ಸಂಭವಿಸಬಹುದು.

ಕಟಕ
ಕೆಲವರ ವರ್ತನೆ ಹಾಗೂ ಮಾತುಗಳು ನಿಮ್ಮ  ದೈನಂದಿನ ಕಾರ್ಯದ ಮೇಲೆ ಪರಿಣಾಮ ಬೀರಲಿದೆ. ಅದನ್ನೆಲ್ಲ ಗಂಭೀರವಾಗಿ ಪರಿಗಣಿಸದಿರಿ.

ಸಿಂಹ
ಎಲ್ಲಾ ಕಾರ್ಯಗಳು ಇಂದು ನಿಧಾನ ಗೊಳ್ಳುತ್ತವೆ. ಆಪ್ತರ ಜತೆಗಿನ ಸಂಬಂಧದಲ್ಲಿ ಬಿಕ್ಕಟ್ಟು ಉಂಟಾದೀತು. ಸಹನೆಯಿಂದ ವರ್ತಿಸುವುದು ಮುಖ್ಯ.

ಕನ್ಯಾ
ಈ ದಿನ ನೀವು ಬಯಸಿದಂತೆ ಸಾಗದು. ಮನಸ್ಸು ಕೆಡಿಸುವ ವಿದ್ಯಮಾನ ಉಂಟಾದೀತು. ಅಸಹನೆ ಹೆಚ್ಚಳ. ಬಂಧುಗಳಲ್ಲಿ ವಿರಸ.

ತುಲಾ
ಯಾರದೋ ಚಿತಾವಣೆಗೆ ಒಳಗಾಗಿ  ಆಪ್ತರನ್ನು ದೂರ ಮಾಡಿಕೊಳ್ಳಬೇಡಿ. ವದಂತಿ ಕಣ್ಣುಮುಚ್ಚಿ ನಂಬಬೇಡಿ. ವಿವೇಕವಿರಲಿ.

ವೃಶ್ಚಿಕ
ಹಣದ ಹೂಡಿಕೆಯಲ್ಲಿ ಎಚ್ಚರ ವಹಿಸಿ. ಊಹಾತ್ಮಕ ವ್ಯವಹಾರ ನಿಮಗೆ ಲಾಭ ತರದು. ವೃತ್ತಿಯಲ್ಲಿ ಹಿನ್ನಡೆ ಅನುಭವಿಸುವಿರಿ. ಬಂಧುಗಳಿಂದ ಕಿರಿಕಿರಿ. ಮಾನಸಿಕ ಅಶಾಂತಿ.

ಧನು
ಅತಿಯಾದ ಭಾವುಕತೆ ನಿಮ್ಮ ಕೆಲಸ ಕೆಡಿಸಬಹುದು. ವಿವೇಕ ನಶಿಸಬಹುದು. ಕೆಲ ವಿಚಾರಗಳಲ್ಲಿ  ನಿರ್ಭಾವುಕ ಮನಸ್ಥಿತಿ ಒಳ್ಳೆಯದು.

ಮಕರ
ಸಣ್ಣ ಕೆಲಸಕ್ಕೂ ಅತಿಯಾದ ಶ್ರಮ ಹಾಕಬೇಕಾಗುವುದು.  ಅದಕ್ಕೆ ಕಾರಣ ಗ್ರಹಗತಿ ನಿಮಗಿಂದು ಪೂರಕ ಆಗಿಲ್ಲದಿರುವುದು. ಸಹನೆಯಿರಲಿ.

ಕುಂಭ
ಭಾವನಾತ್ಮಕ ಏರುಪೇರು. ಇದು ನಿಮ್ಮ ನಿರ್ವಹಣೆಯ ಮೇಲೆ ಪರಿಣಾಮ ಬೀರುವುದು. ಸಂಯಮದಿಂದ ವರ್ತಿಸುವುದೊಳಿತು.

ಮೀನ
ಖಾಸಗಿ ಬದುಕಲ್ಲಿ ಸಮಸ್ಯೆ ಎದುರಿಸುವಿರಿ. ಪ್ರತಿಯೊಂದು ನಡೆನುಡಿಯಲ್ಲೂ ಎಚ್ಚರ ವಹಿಸಿ. ಆತುರದ ವರ್ತನೆ ತೋರದಿರಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!