Wednesday, October 22, 2025

ಆಂಧ್ರದ ಊಟ ಅಷ್ಟೇ ಅಲ್ಲ, ಇನ್ವೆಸ್ಟ್‌ಮೆಂಟ್ಸ್‌ ಕೂಡ ಖಾರ! ಉರ್ಕೋಬೇಡಿ ಎಂದ ನಾರಾ ಲೋಕೇಶ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಆಂಧ್ರದ ಆಹಾರ ಖಾರವಾಗಿದೆ ಎಂದು ಅವರು ಹೇಳುತ್ತಾರೆ. ನಮ್ಮ ಕೆಲವು ಹೂಡಿಕೆಗಳು ಕೂಡ ಈಗ ಅವರಿಗೆ ಖಾರವಾಗಿವೆ ಎಂದು ತೋರುತ್ತದೆ. ನಮ್ಮ ನೆರೆಹೊರೆಯವರು ಈಗಾಗಲೇ ಅದರ ಘಾಟು ಅನುಭವಿಸುತ್ತಿದ್ದಾರೆ ಎಂದು ಮೆಣಸಿಕಾಯಿ ಇಮೋಜಿ ಹಾಕಿ ಕರ್ನಾಟಕಕ್ಕೆ ಆಂಧ್ರ ಐಟಿ ಸಚಿವ ನಾರಾ ಲೋಕೇಶ್‌ ಪ್ರಿಯಾಂಕ್‌ ಖರ್ಗೆ ಅವರಿಗೆ  ಟಾಂಗ್‌ ನೀಡಿದ್ದಾರೆ.

ಗೂಗಲ್‌ ವಿಶಾಖಪಟ್ಟಣದಲ್ಲಿ 1.3 ಲಕ್ಷ ಕೋಟಿ ರೂ. ಹೂಡಿಕೆ ಮಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಕರ್ನಾಟಕ ಮತ್ತು ಆಂಧ್ರ ಮಧ್ಯೆ ಜಟಾಪಟಿ ನಡೆಯುತ್ತಿದೆ.

ಕರ್ನಾಟಕದ ಐಟಿ ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ಗೂಗಲ್‌ ಕಂಪನಿಗೆ ಆಂಧ್ರಪ್ರದೇಶ ನೀಡಿದ ಪ್ರೋತ್ಸಾಹಕ ಪ್ಯಾಕೇಜ್ ಆರ್ಥಿಕ ವಿಪತ್ತು ಎಂದು ಬಣ್ಣಿಸಿದ ಬೆನ್ನಲ್ಲೇ ನಾರಾ ಲೋಕೇಶ್‌ ಈಗ ಎಕ್ಸ್‌ನಲ್ಲಿ ಟಾಂಗ್‌ ನೀಡಿ ಆಂಧ್ರಪ್ರದೇಶ ಬೆಳವಣಿಗೆ ಆಗುತ್ತಿದೆ. ಕಿರಿಯ ರಾಜ್ಯದಲ್ಲಿ ಅತಿ ಹೆಚ್ಚು ಹೂಡಿಕೆಯಾಗುತ್ತಿದೆ ಎಂದು ಬರೆದು ಎಲ್ಲಿಯೂ ಕರ್ನಾಟಕದ ಹೆಸರನ್ನು ಉಲ್ಲೇಖಿಸದೇ ತಿರುಗೇಟು ನೀಡಿದ್ದಾರೆ.

error: Content is protected !!