April 12, 2026
Sunday, April 12, 2026
spot_img

ಬಿಸಿಲ ಝಳಕ್ಕೆ ಬ್ರೇಕ್ ಹಾಕಿದ ಮಳೆರಾಯ: ಹುಬ್ಬಳ್ಳಿಯಲ್ಲಿ ವರುಷದ ಮೊದಲ ಮಳೆ ಸಂಭ್ರಮ

ಹೊಸದಿಗಂತ ಹುಬ್ಬಳ್ಳಿ:

ಕಳೆದ ಕೆಲವು ದಿನಗಳಿಂದ ಸತತವಾಗಿ ಸುಡುತ್ತಿದ್ದ ಬಿಸಿಲಿನ ಬೇಗೆಯಿಂದ ಕಂಗಾಲಾಗಿದ್ದ ಹುಬ್ಬಳ್ಳಿಯ ಜನತೆಗೆ ಮಂಗಳವಾರ ವರುಣದೇವ ತಂಪೆರೆದಿದ್ದಾನೆ. ಮಧ್ಯಾಹ್ನ ಸುಮಾರು 3 ಗಂಟೆಯ ವೇಳೆಗೆ ದಿಢೀರ್ ಆಗಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿ, ಕೆಲವೇ ಕ್ಷಣಗಳಲ್ಲಿ ಗುಡುಗು-ಸಿಡಿಲು ಸಹಿತ ಭಾರೀ ಮಳೆ ಸುರಿಯಿತು.

ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಅಬ್ಬರಿಸಿದ ಗಾಳಿ-ಮಳೆಗೆ ರಸ್ತೆಗಳು ಜಲಾವೃತವಾದವು. ವರ್ಷದ ಮೊದಲ ಮಳೆಯಾದ ಕಾರಣ ನಗರದ ಹಲವೆಡೆ ಯುವಕರು ಮಳೆಯಲ್ಲಿ ನೆನೆದು ಸಂಭ್ರಮಿಸಿದರೆ, ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳು ಮಳೆಯಿಂದ ರಕ್ಷಿಸಿಕೊಳ್ಳಲು ಕಟ್ಟಡಗಳ ಆಶ್ರಯ ಪಡೆಯಬೇಕಾಯಿತು. ಮಾರುಕಟ್ಟೆ ಪ್ರದೇಶದಲ್ಲಿ ವ್ಯಾಪಾರಿಗಳು ತಮ್ಮ ಸರಕುಗಳನ್ನು ಮಳೆಯಿಂದ ಕಾಪಾಡಿಕೊಳ್ಳಲು ಹರಸಾಹಸ ಪಟ್ಟರು.

ಗಟಾರುಗಳು ತುಂಬಿ ಹರಿದ ಪರಿಣಾಮ ವಾಹನ ಸವಾರರು ನೀರಿನಲ್ಲೇ ಸಂಚರಿಸಬೇಕಾಯಿತು. ಒಟ್ಟಾರೆಯಾಗಿ, ಈ ಅಕಾಲಿಕ ಮಳೆಯು ನಗರದ ಉಷ್ಣಾಂಶವನ್ನು ತಗ್ಗಿಸಿ, ಬಸವಳಿದಿದ್ದ ನಾಗರಿಕರಲ್ಲಿ ಹೊಸ ಚೈತನ್ಯ ಮೂಡಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !