ಹೊಸದಿಗಂತ ವರದಿ ಕಲಬುರಗಿ:
ರಾಷ್ಟ್ರೀಯ ಸ್ವಯಂಸೇವಕ ಸಂಘ ಕಲಬುರಗಿ ಜಿಲ್ಲೆಯ ವತಿಯಿಂದ ಅ.19ರ ಭಾನುವಾರ ಮಧ್ಯಾಹ್ನ 3 ಗಂಟೆಗೆ ಜಿಲ್ಲೆಯ ಚಿತ್ತಾಪುರ ನಗರದಲ್ಲಿ ಹಮ್ಮಿಕೊಂಡಿದ್ದ ಪಥಸಂಚಲನದ ಕಾರ್ಯಕ್ರಮದ ನಿಮಿತ್ತ ಅಲಂಕಾರಗೊಳಿಸಿದ ಭಗವಾ ಧ್ವಜಗಳು, ಕಟೌಟ್ ಹಾಗೂ ಬಂಟಿಂಗ್ಸ್,ಗಳನ್ನು ಅಲ್ಲಿಯ ಪುರಸಭೆ ಸಿಬ್ಬಂದಿಗಳು ತೆರವುಗೊಳಿಸಿದ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವ ಹಾಗೂ ವಿಜಯದಶಮಿಯ ಉತ್ಸವದ ಅಂಗವಾಗಿ ಪೂರ್ವ ನಿರ್ಧಾರಿತ ಕಾರ್ಯಕ್ರಮದಂತೆ ಗಣವೇಷಧಾರಿ ಸ್ವಯಂಸೇವಕರ ಪಥಸಂಚಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದಕ್ಕಾಗಿ ಅನುಮತಿ ಸಹ ಪಡೆಯಲಾಗಿತ್ತು. ಆದರೆ, ಶುಕ್ರವಾರ ತಡರಾತ್ರಿ ಅಲ್ಲಿನ ಪುರಸಭೆ ಸಿಬ್ಬಂದಿ ಚಿತ್ತಾಪುರ ನಗರದಲ್ಲಿ ಅಲಂಕಾರದ ದೃಷ್ಟಿಯಿಂದ ಅಳವಡಿಸಿದ ಭಗವಾ ಧ್ವಜಗಳು, ಕಟೌಟ್ ಹಾಗೂ ಸ್ವಾಗತ ಬ್ಯಾನರ್, ಗಳನ್ನು ತೆರವುಗೊಳಿಸಿದೆ.