April 12, 2026
Sunday, April 12, 2026
spot_img

ದಿನಭವಿಷ್ಯ: ದೈನಂದಿನ ಗುರಿ ಈಡೇರಿಕೆಗೆ ಗಮನ ಕೊಡಿ, ಕುಟುಂಬದಲ್ಲಿ ಸಣ್ಣಪುಟ್ಟ ಮನಸ್ತಾಪ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೇಷ
ಯಾವುದೇ ಕಾರ್ಯವನ್ನು ಯೋಚಿಸಿ ನಡೆಸಿ. ಖರೀದಿಯಲ್ಲೂ ಎಚ್ಚರವಿರಲಿ. ಕಿಸೆ ಖಾಲಿಯಾದೀತು. ಕೌಟುಂಬಿಕ ಹೊರೆ ಆತಂಕ.
ವೃಷಭ
ಆರಂಭದಲ್ಲಿ ಹಿನ್ನಡೆ ಅನುಭವಿಸಿದರೂ ಬಳಿಕ ನಿಮಗೆ ಪೂರಕ ಪರಿಸ್ಥಿತಿ. ಕೆಲ ವ್ಯಕ್ತಿಗಳಿಂದ ಕಿರಿಕಿರಿ ಎದುರಿಸುವಿರಿ. ಅವರನ್ನು ಕಡೆಗಣಿಸಿ.
ಮಿಥುನ
ಉದ್ವಿಗ್ನತೆ ಆತಂಕ. ಕೌಟುಂಬಿಕ ಸಮಸ್ಯೆ. ಅದನ್ನು ಪರಿಹರಿಸಲು ಅವರೊಡನೆ ಸೂಕ್ತ ಸಮಾಲೋಚನೆ ನಡೆಸುವುದೇ ಸೂಕ್ತ ದಾರಿ.
ಕಟಕ
ಆಹಾರದ ವಿಷಯದಲ್ಲಿ ಜಾಗ್ರತೆ ಇರಲಿ. ಆರೋಗ್ಯ ಕೆಡಿಸಿಕೊಳ್ಳಬೇಡಿ. ಕುಟುಂಬದಲ್ಲಿ ಸಣ್ಣಪುಟ್ಟ ಮನಸ್ತಾಪ ಸಂಭವ.
ಸಿಂಹ
ಕಾರ್ಯ ಸಿದ್ಧಿ. ಮಾನಸಿಕ ಗೊಂದಲ ನಿವಾರಣೆ. ಆರೋಗ್ಯದ ಕುರಿತಾದ ಚಿಂತೆ ಪರಿಹಾರ. ಕುಲದೇವರ ಪ್ರಾರ್ಥನೆ ಮಾಡಿ.
ಕನ್ಯಾ
ನಿಮ್ಮ ದೈನಂದಿನ ಗುರಿ ಈಡೇರಿಕೆಗೆ ಗಮನ ಕೊಡಿ. ಅದರಿಂದ ಎಲ್ಲವೂ ಸುಸೂತ್ರವಾಗುತ್ತದೆ. ಸುತ್ತಲಿರುವವರ ಜತೆ ತಿಕ್ಕಾಟ ತಪ್ಪಿಸಿ.
ತುಲಾ
ಸಾಹಸದ ಪ್ರವೃತ್ತಿ ನಿಮ್ಮನ್ನು ದುಸ್ಸಾಹಸಕ್ಕೆ ಪ್ರೇರೇಪಿಸಬಹುದು. ಎಚ್ಚರ ವಹಿಸಿ. ಉದ್ಯೋಗ
ದಲ್ಲಿ ಕಿರಿಕಿರಿ. ಸಹೋದ್ಯೋಗಿಗಳ ಅಸಹಕಾರ.
ವೃಶ್ಚಿಕ
ನಿಮ್ಮ ಇಂದಿನ ಕಾರ್ಯ ನಾಳೆಗೆ ಪರಿಣಾಮ ಬೀರಲಿದೆ. ಮಹತ್ವದ ನಿರ್ಧಾರ ಯೋಚಿಸಿ ತೆಗೆದುಕೊಳ್ಳಿ. ಸಹಕಾರ ಪಡೆಯಿರಿ.
ಧನು
ಮನಸ್ಸು ವಿಚಲಿತ ಆಗುವ ಬೆಳವಣಿಗೆ ನಡೆದೀತು. ಎಚ್ಚರಿಕೆಯ ಹೆಜ್ಜೆಯಿಡಿ. ಆರ್ಥಿಕವಾಗಿ ಸಣ್ಣ ಹಿನ್ನಡೆ. ಬಂಧುಗಳ ಜತೆ ವಿರಸ.
ಮಕರ
ಏಕಕಾಲದಲ್ಲಿ ವಿವಿಧ ಬಗೆಯ ಚಿಂತೆ ಕಾಡಬಹುದು. ವಿಭಿನ್ನ ಪರಿಸ್ಥಿತಿಗಳಿಗೆ ಹೊಂದಿಕೊಂಡು ನಡೆಯುವುದೇ ಸೂಕ್ತ ದಾರಿ.
ಕುಂಭ
ವಿವಿಧ ದಿಕ್ಕುಗಳಿಂದ ಒತ್ತಡ ಅನುಭವಿಸುತ್ತೀರಿ. ಮುಖ್ಯವಾಗಿ ನಿಮ್ಮ ಖಾಸಗಿ ಬದುಕಿನ ಮೇಲೆ ಇದು ಪರಿಣಾಮ ಬೀರುವುದು.
ಮೀನ
ನೀವಿಂದು ನಿಮ್ಮ ಕಾಳಜಿಯ ವಿಷಯಗಳತ್ತ ಪ್ರಮುಖವಾಗಿ ಗಮನ ಹರಿಸಬೇಕು. ನಿಮ್ಮ ವ್ಯಕ್ತಿತ್ವದಲ್ಲಿ, ವರ್ತನೆಯಲ್ಲಿ ಬದಲಾವಣೆ ತರಬೇಕು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !