Monday, October 20, 2025

CINE | ಪವನ್ ಕಲ್ಯಾಣ್ ಅಭಿಮಾನಿಗಳಿಗೆ ಗುಡ್ ನ್ಯೂಸ್: OTTಗೆ ಬರ್ತಿದೆ ‘OG’!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪವನ್ ಕಲ್ಯಾಣ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಇತ್ತೀಚೆಗೆ ಚಿತ್ರಮಂದಿರಗಳಲ್ಲಿ ಸಂಚಲನ ಮೂಡಿಸಿದ್ದ ‘ದಿ ಕಾಲ್ ಹಿಮ್ ಒಜಿ’ (The Call Him OG) ಸಿನಿಮಾ ಇದೀಗ ಒಟಿಟಿ ಪ್ರೇಕ್ಷಕರ ಮುಂದೆ ಬರಲಿದೆ. ಕೇವಲ ಮೂರು ವಾರಗಳ ಥಿಯೇಟ್ರಿಕಲ್ ಪ್ರದರ್ಶನದ ನಂತರ, ಚಿತ್ರವು ಅಕ್ಟೋಬರ್ 23ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ ಎಂದು ಅಧಿಕೃತವಾಗಿ ಘೋಷಿಸಿದೆ.

ಸುಜೀತ್ ನಿರ್ದೇಶನದ ಈ ಆ್ಯಕ್ಷನ್ ಪ್ಯಾಕ್ ಚಿತ್ರದಲ್ಲಿ ಪವನ್ ಕಲ್ಯಾಣ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಮಟ್ಟದ ಕಲೆಕ್ಷನ್‌ಗಳನ್ನು ಗಳಿಸಿತ್ತು. ಪವನ್ ಅವರ ವಿಸ್ಫೋಟಕ ಅಭಿನಯ, ಥಮನ್ ನೀಡಿದ ಶಕ್ತಿಶಾಲಿ ಸಂಗೀತ ಹಾಗೂ ತಾಂತ್ರಿಕ ತಂಡದ ಕೆಲಸ ಚಿತ್ರವನ್ನು 2025ರ ಅತ್ಯಂತ ಯಶಸ್ವಿ ಚಿತ್ರಗಳಲ್ಲಿ ಒಂದಾಗಿ ಗುರುತಿಸಿದೆ.

ನೆಟ್‌ಫ್ಲಿಕ್ಸ್ ತನ್ನ ಸಾಮಾಜಿಕ ಮಾಧ್ಯಮದ ಮೂಲಕ ಪ್ರಕಟಣೆ ಹೊರಡಿಸಿದ್ದು, “ಒಮ್ಮೆ ಮುಂಬೈನಲ್ಲಿ ಬಿರುಗಾಳಿ ಇತ್ತು, ಈಗ ಅದು ಮತ್ತೆ ಬರುತ್ತಿದೆ” ಎಂದು ಉಲ್ಲೇಖಿಸಿದೆ. ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಸೇರಿದಂತೆ ಐದು ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.

ಪವನ್ ಕಲ್ಯಾಣ್‌ ಜೊತೆಗೆ ಇಮ್ರಾನ್ ಹಶ್ಮಿ, ಪ್ರಕಾಶ್ ರಾಜ್, ಅರ್ಜುನ್ ದಾಸ್, ಪ್ರಿಯಾಂಕಾ ಮೋಹನ್ ಮತ್ತು ಶ್ರೀಯಾ ರೆಡ್ಡಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

error: Content is protected !!