September 20, 2026
Sunday, September 20, 2026
spot_img

ಬಿಸಿಲ ಬೇಗೆಗೆ ತಂಪೆರೆದ ವರುಣ: ಬೆಳ್ತಂಗಡಿ, ಸುಳ್ಯ ತಾಲೂಕಿನ ಹಲವೆಡೆ ಉತ್ತಮ ಮಳೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ಶನಿವಾರ ಸಂಜೆ ಉತ್ತಮ ಮಳೆಯಾಗಿದೆ. ಬಿಸಿಲ ಬೇಗೆಗೆ ಹೈರಾಣಾಗಿದ್ದ ಜನತೆಗೆ ತುಸು ಸಮಾಧಾನ ತಂದಿದೆ.

ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆ, ಧರ್ಮಸ್ಥಳದಲ್ಲಿ ಉತ್ತಮ ಮಳೆಯಾಗಿದ್ದು, ವಾಹನ ಸವಾರರು ಸಂಚರಿಸಲು ಪರದಾಡುವಂತಾಗಿದೆ. ಇನ್ನು ಮುಂಡಾಜೆ, ಗುರುವಾಯನಕೆರೆ ಮೊದಲಾದೆಡೆ ಹನಿ ಹನಿ ಮಳೆಯಾಗಿದೆ.

ಗುರುವಾಯನಕರೆ ಪ್ರದೇಶದಲ್ಲಿ ಸಂಜೆ ವೇಳೆ ಮೋಡ ಕವಿದ ವಾತಾವರಣವಿತ್ತು ಬಳಿಕ ಮಳೆ ಸುರಿದಿದೆ. ಕಾಜೂರು-ಕಿಲ್ಲೂರು ಕಡೆ ಗುಡುಗು ಸಿಡಿಲು ಮಾತ್ರ ಇತ್ತು. ಶುಕ್ರವಾರ ಸಂಜೆ ನಾರಾವಿ ಸುತ್ತಮುತ್ತ ಉತ್ತಮ ಮಳೆ ಸುರಿದಿತ್ತು

ಇತ್ತ ಸುಳ್ಯ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ , ಕೊಲ್ಲಮೊಗ್ರ ಸೇರಿದಂತೆ ಇತರೆ ಭಾಗದಲ್ಲಿ ಸಂಜೆ ವೇಳೆಯಲ್ಲಿ ಸುಮಾರು 15 ನಿಮಿಷಗಳ ಕಾಲ ತುಂತುರು ಮಳೆಯಾಗಿದ್ದು, ಸುಡು ಬಿಸಿಲ ಬೇಗೆಗೆ ಮಳೆ ಎರೆದು ಅಲ್ಪ ತಂಪೆರೆದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !