Thursday, October 23, 2025

ಚಿತ್ತಾಪುರದಲ್ಲಿ ನ.2 ರಂದು ಆರ್ ಎಸ್ ಎಸ್ ಪಥಸಂಚಲನ ನಡೆಯುತ್ತೆ: ಬಿ.ವೈ ವಿಜಯೇಂದ್ರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನವೆಂಬರ್ 2ರಂದು ಚಿತ್ತಾಪುರದಲ್ಲಿ ರಾಷ್ಟ್ರೀಯ ಸ್ವಯಂ ಸೇವಾ ದಳದ ಪಥಸಂಚಲನ ನಡೆಯಲಿದೆ ಎಂಬುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದಾರೆ.

ಬೆಂಗಳೂರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆಗೆ ಆರ್ ಎಸ್ ಎಸ್ ಟೀಕೆ ಮಾಡೋ ದುರ್ಬುದ್ಧಿ ಯಾಕೆ ಬಂದಿದೆಯೋ ಗೊತ್ತಿಲ್ಲವಾಗಿದೆ. ಆರ್ ಎಸ್ ಎಸ್ ಟೀಕೆ ಮಾಡ್ತಿರೋದು ಪ್ರಚಾರಕ್ಕೋ ಅಥವಾ ಸಿಎಂ ಕುರ್ಚಿಗೆ ಟವಲ್ ಹಾಕೋದಕ್ಕೋ ಗೊತ್ತಿಲ್ಲ ಎಂದರು.

ಗಾಂಧಿ ಕುಟುಂಬದಿಂದಲೇ ಆರ್ ಎಸ್ ಎಸ್ ಮಂಡಿಸೋದಕ್ಕೆ ಆಗಿಲ್ಲ, ಇನ್ನೂ ಬೇರೆಯವರಿಂದ ಅಸಾಧ್ಯದ ಮಾತಾಗಿದೆ. ಇಂತಹ ಪ್ರತಿನಿತ್ಯ ಹೇಳಿಕೆ ಕೊಡೋ ಮೂಲಕ ವಾಸ್ತವದ ಸತ್ಯ ಮರೆ ಮಾಚೋ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂಬುದಾಗಿ ವಾಗ್ಧಾಳಿ ನಡೆಸಿದರು.

ನವೆಂಬರ್.2ರಂದು ನಿಗದಿಯಂತೆ ಚಿತ್ತಾಪುರದಲ್ಲಿ ಆರ್ ಎಸ್ ಎಸ್ ಪಥ ಸಂಚಲನ ನಡೆದೇ ನಡೆಯುತ್ತದೆ. ಈಗಾಗಲೇ ಹೈಕೋರ್ಟ್ ಕೂಡ ಅನುಮತಿ ನೀಡಿದೆ. ರಾಜ್ಯದಲ್ಲಿ ಎಲ್ಲಾ ಕ್ಷೇತ್ರದಲ್ಲಿ ಪಥ ಸಂಚಲನ ಆಗುತ್ತಿದೆ. ಹಾಗೆಯೇ ಚಿತ್ತಾಪುರದಲ್ಲಿಯೂ ನಡೆಯುತ್ತದೆ ಎಂದರು.

error: Content is protected !!