September 30, 2026
Wednesday, September 30, 2026
spot_img

Snacks | ಸ್ಟ್ರೀಟ್ ಸ್ಟೈಲ್ ಭೇಲ್ ಪುರಿ ಈಗ ಮನೆಯಲ್ಲೇ ಮಾಡಿ: ತುಂಬಾನೇ ಸಿಂಪಲ್ ಇದೆ

ಸಂಜೆ ಸಮಯದಲ್ಲಿ ಏನಾದರೂ ಕ್ರಂಚಿ ಸ್ನ್ಯಾಕ್ಸ್ ತಿನ್ನಬೇಕು ಅನ್ನಿಸಿದಾಗ ಬಹುತೇಕ ಜನರಿಗೆ ನೆನಪಾಗುವ ಸ್ಟ್ರೀಟ್ ಫುಡ್ ಭೇಲ್ ಪುರಿ. ಸಾಮಾನ್ಯವಾಗಿ ರಸ್ತೆ ಬದಿಯ ಅಂಗಡಿಗಳಲ್ಲಿ ಪೇಪರ್ ಕೋನ್‌ನಲ್ಲಿ ಸಿಗುವ ಈ ರುಚಿಕರವಾದ ಚಾಟ್ ಎಲ್ಲರಿಗೂ ತುಂಬಾ ಇಷ್ಟ. ಚುರುಮುರಿ, ತರಕಾರಿಗಳು, ಹುಳಿ-ಸಿಹಿ ಚಟ್ನಿಗಳು ಮತ್ತು ಸೆವ್ ಸೇರಿಸಿ ಮಾಡುವ ಈ ತಿಂಡಿ ಕ್ರಂಚಿ, ಹುಳಿ, ಖಾರ ಮತ್ತು ಸಿಹಿ ರುಚಿಗಳ ಮಿಶ್ರಣವಾಗಿರುತ್ತದೆ. ಭಾರತದಲ್ಲಿ ಬಹಳ ಜನಪ್ರಿಯವಾದ ಈ ಸ್ಟ್ರೀಟ್ ಫುಡ್ ಮೂಲತಃ ಮುಂಬೈ ಭಾಗದಲ್ಲಿ ಹೆಚ್ಚು ಪ್ರಸಿದ್ಧಿಯಾಗಿದೆ.

ಕೆಲವು ಸರಳ ಪದಾರ್ಥಗಳಿದ್ದರೆ ಮನೆಯಲ್ಲೇ ಸುಲಭವಾಗಿ ಮಾಡಬಹುದು. ಅಷ್ಟೇ ಅಲ್ಲ, ಮನೆಯಲ್ಲೇ ಮಾಡಿದರೆ ಸ್ವಚ್ಛವಾಗಿಯೂ ರುಚಿಯಾಗಿಯೂ ತಿನ್ನಬಹುದು.

ಬೇಕಾಗುವ ಪದಾರ್ಥಗಳು

ಚುರ್ಮುರಿ – 3 ಕಪ್
ಸಣ್ಣವಾಗಿ ಕತ್ತರಿಸಿದ ಈರುಳ್ಳಿ – 1
ಸಣ್ಣವಾಗಿ ಕತ್ತರಿಸಿದ ಟೊಮೆಟೊ – 1
ಬೇಯಿಸಿದ ಆಲೂಗಡ್ಡೆ – 1
ಹುರಿದ ಕಡಲೆಕಾಯಿ – 2 ಟೇಬಲ್ ಸ್ಪೂನ್
ಸೆವ್ – ಅರ್ಧ ಕಪ್
ಕೊತ್ತಂಬರಿ ಸೊಪ್ಪು – ಸ್ವಲ್ಪ
ಹುಣಸೆ ಸಿಹಿ ಚಟ್ನಿ – 2 ಟೇಬಲ್ ಸ್ಪೂನ್
ಹಸಿರು ಚಟ್ನಿ – 2 ಟೇಬಲ್ ಸ್ಪೂನ್
ಚಾಟ್ ಮಸಾಲಾ – ಅರ್ಧ ಟೀ ಸ್ಪೂನ್
ನಿಂಬೆ ರಸ – 1 ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ

ಮೊದಲು ದೊಡ್ಡ ಬೌಲ್ ತೆಗೆದುಕೊಂಡು ಅದರಲ್ಲಿ ಚುರ್ಮುರಿ ಹಾಕಿ. ನಂತರ ಕತ್ತರಿಸಿದ ಈರುಳ್ಳಿ, ಟೊಮೆಟೊ, ಬೇಯಿಸಿದ ಆಲೂಗಡ್ಡೆ ಮತ್ತು ಹುರಿದ ಕಡಲೆಕಾಯಿ ಸೇರಿಸಿ. ಈಗ ಹುಣಸೆ ಸಿಹಿ ಚಟ್ನಿ, ಹಸಿರು ಚಟ್ನಿ, ಚಾಟ್ ಮಸಾಲಾ, ಉಪ್ಪು ಮತ್ತು ನಿಂಬೆ ರಸ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಬೇಕು. ಕೊನೆಯಲ್ಲಿ ಸೆವ್ ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಮತ್ತೊಮ್ಮೆ ನಿಧಾನವಾಗಿ ಕಲಸಿ.

ಇದನ್ನು ತಯಾರಿಸಿದ ತಕ್ಷಣವೇ ತಿನ್ನುವುದು ಉತ್ತಮ, ಆಗ ಅದರ ಕ್ರಂಚಿ ರುಚಿ ಹೆಚ್ಚು ಸಿಗುತ್ತದೆ.

Must Read