Thursday, October 23, 2025

ಇನ್ನೋವಾ, ಸ್ವಿಫ್ಟ್ ನಡುವೆ ಡಿಕ್ಕಿ: ಸಿಂದಗಿ ಬೈಪಾಸ್‌ನಲ್ಲಿ ಅದೃಷ್ಟವಶಾತ್ ಪಾರಾದ ಶಾಸಕರ ಕುಟುಂಬ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿಂದಗಿ ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಮನಗೂಳಿ ಅವರ ಕಾರಿಗೆ ವಿಜಯಪುರ ಜಿಲ್ಲೆಯ ಸಿಂದಗಿ ಬೈಪಾಸ್ ಬಳಿ ಮತ್ತೊಂದು ವಾಹನ ಡಿಕ್ಕಿ ಹೊಡೆದಿದ್ದು, ಸಣ್ಣ ಅಪಘಾತ ಸಂಭವಿಸಿದೆ. ಅಪಘಾತದ ಸಮಯದಲ್ಲಿ ಶಾಸಕರ ಪುತ್ರಿ ಮತ್ತು ಸಹೋದರನ ಪುತ್ರ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಘಟನೆ ವಿವರ:

ಸಿಂದಗಿ ಬೈಪಾಸ್‌ನಲ್ಲಿ ಈ ಘಟನೆ ನಡೆದಿದ್ದು, ಶಾಸಕರ ಇನ್ನೋವಾ ಹೈಕ್ರಾಸ್ ಕಾರಿಗೆ, ಕಲಬುರಗಿಯಿಂದ ಸಿಂದಗಿ ಕಡೆಗೆ ಬರುತ್ತಿದ್ದ ಸ್ವಿಫ್ಟ್ ಕಾರು ಡಿಕ್ಕಿ ಹೊಡೆದಿದೆ. ಈ ಇನ್ನೋವಾ ಕಾರು ವಿಧಾನಸೌಧದ ಪಾಸ್ ಹೊಂದಿತ್ತು ಎಂದು ತಿಳಿದುಬಂದಿದೆ. ಡಿಕ್ಕಿಯ ರಭಸಕ್ಕೆ ಎರಡೂ ಕಾರುಗಳಿಗೆ ಹಾನಿಯಾಗಿದೆ.

ಶಾಸಕ ಅಶೋಕ್ ಮನಗೂಳಿ ಅವರ ಕುಟುಂಬದ ಸದಸ್ಯರು ಕಾರಿನಲ್ಲಿದ್ದರೂ, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಘಟನೆಯ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

error: Content is protected !!