Tuesday, October 28, 2025

ರಾಜ್ಯದ 12 ಪ್ರಮುಖ ನದಿಗಳ ನೀರು ಕಲುಷಿತ, ಕುಡಿಯಲು ಯೋಗ್ಯವೇ ಇಲ್ಲ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದ 12 ನದಿಗಳ ನೀರು ಕುಡಿಯಲು ಸುರಕ್ಷಿತವಲ್ಲ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ ಎನ್ನಲಾಗಿದೆ.

ರಾಜ್ಯದ 12 ಪ್ರಮುಖ ನದಿಗಳ ನೀರಿನ ಗುಣಮಟ್ಟವನ್ನು  ಮಾಲಿನ್ಯ ನಿಯಂತ್ರಣ ಮಂಡಳಿ ಪರಿಶೀಲನೆ  ನಡೆದಿದ್ದು, ಅದರಲ್ಲಿ  12 ನದಿಗಳ ನೀರು ಕುಡಿಯಲು ಯೋಗ್ಯವಲ್ಲ ಎನ್ನುವ ವರದಿ ನೀಡಿದೆ.

12 ನದಿಗಳ ನೀರನ್ನ 32 ಕಡೆಗಳಲ್ಲಿ ಪರಿಶೀಲಿಸಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ನೀಡಿದೆ. ಪರೀಕ್ಷೆಗೆ ಒಳಪಟ್ಟ ನದಿಗಳ ನೀರಿನ ಪೈಕಿ ಯಾವುದೇ ನದಿಗೂ ಕೂಡ ಎ ದರ್ಜೆಯ ನೀರು ಎಂದು ಮಾನ್ಯತೆ ಸಿಕ್ಕಿಲ್ಲ. ಎ ದರ್ಜೆ ಎಂದರೇ, ಪರಿಶುದ್ದ ನೀರು, ಕುಡಿಯಲು ಯೋಗ್ಯವಾದ ನೀರು ಎಂದರ್ಥ.

ಕಳೆದ ಸೆಪ್ಟೆಂಬರ್ ನಲ್ಲಿ ರಾಜ್ಯದಲ್ಲಿರುವ ಪ್ರಮುಖ ನದಿಗಳ ನೀರು ಅನ್ನು ಪಡೆದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರೀಕ್ಷೆ ನಡೆಸಿತ್ತು. 12 ನದಿಗಳ ನೀರಿನಲ್ಲಿ ಆಮ್ಲಜನಕದ ಕೊರತೆ ಇರೋದು ಪತ್ತೆಯಾಗಿದೆ. ಕರ್ನಾಟಕದ ಜೀವನದಿ ಎಂದೇ ಹೆಸರಾದ ಕಾವೇರಿ ನದಿಯ ನೀರು ಕೂಡ ಕಲುಷಿತವಾಗಿದೆ.  ಕಾವೇರಿ ನದಿಯ ನೀರು ಕೂಡ ಕುಡಿಯಲು ಯೋಗ್ಯವಲ್ಲ. ಕರಾವಳಿಯ ನೇತ್ರಾವತಿ ನದಿ ನೀರಿಗೆ ಮಾತ್ರ ಬಿ ದರ್ಜೆ ಸಿಕ್ಕಿದೆ. ಇನ್ನೂಳಿದ ನದಿಗಳ ನೀರು ಎಲ್ಲವೂ ಸಿ ಮತ್ತು ಡಿ ದರ್ಜೆಯಲ್ಲೇ ಇವೆ.

ಒಟ್ಟು 12 ನದಿಗಳ ನೀರಿನ ಪರೀಕ್ಷೆಯ ವೇಳೆ ನೇತ್ರಾವತಿ ನದಿ ಮಾತ್ರ ಬಿ ದರ್ಜೆಯ ಗುಣಮಟ್ಟವನ್ನು ಹೊಂದಿದ್ದು, ಇದು ನೇರವಾಗಿ ಕುಡಿಯಲು ಸಾಧ್ಯವಿಲ್ಲವಾದರೂ ಸ್ನಾನ ಅಥವಾ ಗೃಹಬಳಕೆಗೆ ಸಂಸ್ಕರಿಸಿದ ನಂತರ ಬಳಸಬಹುದು. ಇನ್ನು ಕಾವೇರಿ, ಲಕ್ಷ್ಮಣ ತೀರ್ಥ, ತುಂಗಭದ್ರ, ಭದ್ರ, ಕೃಷ್ಣ, ಶಿಂಷಾ ಮತ್ತು ಕಬಿನಿ ಸೇರಿದಂತೆ ಎಂಟು ನದಿಗಳು ಸಿ ದರ್ಜೆಯ ಗುಣಮಟ್ಟವನ್ನು ಹೊಂದಿವೆ. ಈ ನದಿಗಳ ನೀರನ್ನು ಗೃಹ ಬಳಕೆಗೆ ಬಳಸಬೇಕಾದರೂ ಸಹ ಕಡ್ಡಾಯವಾಗಿ ಸಂಸ್ಕರಿಸಬೇಕು. ವಿಶೇಷವಾಗಿ, ಕಾವೇರಿ ನದಿಯು ಸಿ ದರ್ಜೆಯಲ್ಲಿರುವುದು ಕಳವಳಕಾರಿಯಾಗಿದೆ, ಏಕೆಂದರೆ ಇದು ರಾಜ್ಯದ ಪ್ರಮುಖ ಜೀವನಾಡಿಯಾಗಿದೆ.

error: Content is protected !!