October 18, 2026
Sunday, October 18, 2026
spot_img

FOOD | ಊಟ ಲೈಟ್ ಆಗಿರ್ಲಿ ಅನ್ನೋರು ಈ ಹೆಸರು ಕಾಳಿನ ಸೂಪ್ ಕುಡೀರಿ

ಹೆಚ್ಚು ಎಣ್ಣೆ-ಮಸಾಲೆ ಇರುವ ಊಟ ತಿಂದ ಬಳಿಕ ಹೊಟ್ಟೆ ಭಾರವಾಗುತ್ತೆ ಎಂದು ಹಲವರು ಹೇಳುತ್ತಾರೆ. ಅಂತಹ ಸಂದರ್ಭಗಳಲ್ಲಿ ಲೈಟ್ ಆಗಿ ಹೊಟ್ಟೆ ತುಂಬುವ ಆಹಾರ ಬೇಕೆನಿಸಿದರೆ ಹೆಸರು ಕಾಳಿನ ಸೂಪ್ ಬೆಸ್ಟ್. ಇದು ತೂಕ ಕಡಿಮೆ ಮಾಡಲು ಯೋಚಿಸುವವರಿಗೂ ಹಾಗೂ ಆರೋಗ್ಯಕರ ಆಹಾರ ತಿನ್ನಲು ಬಯಸುವವರಿಗೂ ಸೂಕ್ತವಾದ ಸರಳ ಹಾಗೂ ಪೌಷ್ಟಿಕ ಆಹಾರ.

ಬೇಕಾಗುವ ಸಾಮಗ್ರಿಗಳು

ಹೆಸರು ಕಾಳು – ½ ಕಪ್
ಟೊಮೇಟೊ – 1
ಬೆಳ್ಳುಳ್ಳಿ – 2 ಕಳಿ
ಶುಂಠಿ – ಸ್ವಲ್ಪ
ಅರಿಶಿಣ – ¼ ಟೀ ಸ್ಪೂನ್
ಮೆಣಸು ಪುಡಿ – ½ ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ನೀರು – ಅಗತ್ಯಕ್ಕೆ
ಕೊತ್ತಂಬರಿ ಸೊಪ್ಪು – ಅಲಂಕಾರಕ್ಕೆ

ಮಾಡುವ ವಿಧಾನ

ಮೊದಲು ಹೆಸರು ಕಾಳನ್ನು ಚೆನ್ನಾಗಿ ತೊಳೆದು 10–15 ನಿಮಿಷ ನೆನೆಸಿಡಿ. ನಂತರ ಕುಕ್ಕರ್‌ನಲ್ಲಿ ಹೆಸರು ಕಾಳು, ಟೊಮೇಟೊ, ಶುಂಠಿ, ಬೆಳ್ಳುಳ್ಳಿ, ಅರಿಶಿಣ ಮತ್ತು ನೀರನ್ನು ಹಾಕಿ 3–4 ವಿಶಿಲ್ ಬರುವಷ್ಟು ಬೇಯಿಸಿ. ತಣ್ಣಗಾದ ಬಳಿಕ ಮಿಶ್ರಣವನ್ನು ಮಿಕ್ಸಿಯಲ್ಲಿ ಸ್ವಲ್ಪ ತರಿತರಿಯಾಗಿ ಅರೆದುಕೊಳ್ಳಿ. ಈಗ ಒಂದು ಪಾತ್ರೆಯಲ್ಲಿ ಹಾಕಿ ಉಪ್ಪು ಮತ್ತು ಮೆಣಸು ಪುಡಿ ಸೇರಿಸಿ 3–4 ನಿಮಿಷ ಕುದಿಯಲು ಬಿಡಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿದರೆ ಹೆಸರು ಕಾಳಿನ ಸೂಪ್ ಸಿದ್ಧ.

Must Read