ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ನಗರ ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ನಡೆಯುತ್ತಿರುವ ಸಾಮಾಜಿಕ-ಆರ್ಥಿಕ ಸಮೀಕ್ಷೆ ಮತ್ತು ಮಳೆ ಹಿನ್ನೆಲೆಯಲ್ಲಿ ರಸ್ತೆ ಗುಂಡಿ ಮುಚ್ಚುವ ಸರ್ಕಾರದ ಗಡುವನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮುಖ್ಯಸ್ಥ ಮಹೇಶ್ವರ್ ರಾವ್ ಅವರು ಹೇಳಿದ್ದಾರೆ.
ಜಾತಿ ಸಮೀಕ್ಷೆ ಹಾಗೂ ಮಳೆ ಹಿನ್ನೆಲೆ ನಗರದಾದ್ಯಂತ ಸಾವಿರಾರು ಗುಂಡಿಗಳನ್ನು ಮುಚ್ಚಲು ಅಕ್ಟೋಬರ್ 31 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನಿಗದಿಪಡಿಸಿದ ಗಡುವನ್ನು ಪೂರೈಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಕಠಿಣ ಸಮಯವನ್ನು ಎದುರಿಸುತ್ತಿದೆ ಎಂದು ಹೇಳಿದರು.
ಮಳೆಯಿಂದಾಗಿ ಮುಚ್ಚಿದ್ದ ಗುಂಡಿಗಳೂ ಕೂಡ ಬಾಯ್ತೆರೆಯುತ್ತಿವೆ. ಮತ್ತೆ ಮತ್ತೆ ಗುಂಡಿಗಳು ಕಾಣಿಸಿಕೊಳ್ಳುತ್ತಿವೆ. ಗುಂಡಿಗಳನ್ನು ಮುಚ್ಚಲು ಸಮೀಕ್ಷೆ ಕಾರ್ಯ ಮತ್ತು ಮಳೆ ಎರಡೂ ದೊಡ್ಡ ಸವಾಲನ್ನು ಎದುರು ಮಾಡುತ್ತಿದೆ ಎಂದು ತಿಳಿಸಿದ್ದಾರೆ. ಇತ್ತ ಜನರು ರಸ್ತೆಗುಂಡಿಗಳನ್ನು ನಿತ್ಯವೂ ಶಪಿಸುತ್ತಾ ಓಡಾಡುತ್ತಿದ್ದಾರೆ. ಮಳೆ ಇದೆ ಸರಿ, ಆದರೆ ಮಳೆ ಇದೆ ಎಂದು ಸ್ಕೂಲ್ ರಜೆ ಇದೆಯಾ? ಆಫೀಸ್ ರಜೆ ಇದೆಯಾ? ಓಡಾಡುವವರು ಓಡಾಡಲೇಬೇಕಿದೆ ಎಂದಿದ್ದಾರೆ.

