ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಕ್ರೇನ್‌ಗೆ ಟೊಮಾಹಾಕ್ ಕ್ರೂಸ್ ಕ್ಷಿಪಣಿಗಳಂತಹ ದೀರ್ಘ-ಶ್ರೇಣಿಯ ಶಸ್ತ್ರಾಸ್ತ್ರಗಳನ್ನು ನೀಡಿದರೆ, ರಷ್ಯಾ ನೀಡುವ ಪ್ರತಿಕ್ರಿಯೆ ಆಘಾತಕಾರಿಯಾಗಿರುತ್ತದೆ ಎಂದು ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಎಚ್ಚರಿಸಿದ್ದಾರೆ.
ರಷ್ಯನ್ ಭೌಗೋಳಿಕ ಸಮಾಜದ 17ನೇ ಮಹಾಸಭೆಯ ಸಂದರ್ಭದಲ್ಲಿ ತಮ್ಮ ಭಾಷಣದಲ್ಲಿ ಪುಟಿನ್ ಈ ಎಚ್ಚರಿಕೆ ನೀಡಿದ್ದಾರೆ. ಉಕ್ರೇನ್‌ಗೆ ಪಶ್ಚಿಮ ರಾಷ್ಟ್ರಗಳು ನೀಡಬಹುದಾದ ದೀರ್ಘ-ಶ್ರೇಣಿಯ ಶಸ್ತ್ರಾಸ್ತ್ರಗಳ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯಿಸಿದ್ದಾರೆ.
ರಷ್ಯಾದ ವಿರುದ್ಧ ಹೊಸ ನಿರ್ಬಂಧಗಳನ್ನು ವಿಧಿಸಿರುವುದು, ನಮ್ಮ ಮೇಲೆ ಒತ್ತಡ ಹೇರುವ ಮತ್ತೊಂದು ಪ್ರಯತ್ನ ಮಾತ್ರ. ಆದರೆ ಇಂತಹ ಕ್ರಮಗಳಿಂದ ರಷ್ಯಾವನ್ನು ಹೆದರಿಸಲಾಗುವುದಿಲ್ಲ. ಎಂದು ಪುಟಿನ್ ಹೇಳಿದ್ದಾರೆ.
ಪುಟಿನ್ ಅವರ ಈ ಹೇಳಿಕೆ, ಉಕ್ರೇನ್‌ಗೆ ಪಾಶ್ಚಾತ್ಯ ರಾಷ್ಟ್ರಗಳು ಹೆಚ್ಚು ಶಕ್ತಿಯುತ ಶಸ್ತ್ರಾಸ್ತ್ರಗಳನ್ನು ಒದಗಿಸಲು ಮುಂದಾಗಿರುವ ಸಂದರ್ಭದಲ್ಲೇ ಹೊರಬಂದಿದ್ದು, ಅಂತಾರಾಷ್ಟ್ರೀಯ ವಲಯದಲ್ಲಿ ಆತಂಕ ಮೂಡಿಸಿದೆ.

