October 10, 2026
Saturday, October 10, 2026
spot_img

ಲಕ್ಷಾಂತರ ಹೃದಯಗಳ ಪ್ರೀತಿ ಪಡೆದ ನಟ: ದರ್ಶನ್ ಹುಟ್ಟುಹಬ್ಬಕ್ಕೆ ‘ಡೆವಿಲ್’ ನಿಂದ ಸ್ಪೆಷಲ್ ಪೋಸ್ಟರ್ ರಿಲೀಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬದಂದು ಡೆವಿಲ್ ಚಿತ್ರದ ತಂಡ ವಿಶೇಷ ಪೋಸ್ಟರ್ ಬಿಡುಗಡೆ ಮಾಡಿ ಶುಭಾಶಯ ತಿಳಿಸಿದೆ. ಈ ಪೋಸ್ಟರ್‌ನಲ್ಲಿ ದರ್ಶನ್ ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

ಚಿತ್ರದ ನಿರ್ದೇಶಕ ಮಿಲನ್ ಪ್ರಕಾಶ್ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ಹಂಚಿಕೊಂಡು, ಲಕ್ಷಾಂತರ ಹೃದಯಗಳ ಪ್ರೀತಿಯನ್ನು ಪಡೆದ ನಟನಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಚಿತ್ರದ ಪ್ರಮುಖ ದೃಶ್ಯದಲ್ಲಿ ಕಾಣಿಸಿಕೊಳ್ಳುವ ವಿಶೇಷ ವೇಷಭೂಷಣವೇ ಈ ಪೋಸ್ಟರ್‌ನಲ್ಲಿದೆ.

ಇದನ್ನೂ ಓದಿ:

ಡೆವಿಲ್ ಚಿತ್ರ ಬಿಡುಗಡೆಯಾಗಿ 60 ದಿನಗಳಾಗಿದ್ದು, ಇನ್ನೂ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಪ್ರೇಕ್ಷಕರು ಚಿತ್ರವನ್ನು ಉತ್ತಮವಾಗಿ ಸ್ವೀಕರಿಸಿದ್ದಾಗಿ ಹೇಳಲಾಗುತ್ತಿದ್ದು. ಇದೇ ವೇಳೆ ದರ್ಶನ್ ಅಭಿನಯದ ಹಳೆಯ ಚಿತ್ರ ಕರಿಯ ಮತ್ತೆ ಬಿಡುಗಡೆಗೊಂಡು ಅಭಿಮಾನಿಗಳಿಂದ ಒಳ್ಳೆಯ ಪ್ರತಿಕ್ರಿಯೆ ಪಡೆದಿದೆ.

Must Read