Wednesday, October 29, 2025

ದಿನಭವಿಷ್ಯ: ಹಳೆ ಸಮಸ್ಯೆ ಮರುಕಳಿಸುವುದು, ಹೊಸ ವ್ಯವಹಾರಕ್ಕೆ ಅವಸರದಿಂದ ಕೈ ಹಾಕಬೇಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೇಷ
ವೃತ್ತಿ ಸಮಸ್ಯೆ ಪರಿಹರಿಸಲೇ ಈ ದಿನ ವ್ಯಯವಾಗಲಿದೆ. ಯಾರನ್ನೂ ಎದುರು ಹಾಕಿಕೊಳ್ಳದಿರಿ. ಸಹನೆಯಿಂದ ವರ್ತಿಸಿ.
ವೃಷಭ
ಹಳೆ ಸಮಸ್ಯೆ ಮರುಕಳಿಸುವುದು. ಮತ್ತೆ ಪರಿಹಾರ ಕಷ್ಟವಾದೀತು. ಇತರರ ಹವ್ಯಾಸಗಳಿಗೆ ಒಗ್ಗಿಕೊಳ್ಳಿ. ಅವರನ್ನು ಬದಲಿಸಲು ಅಸಾಧ್ಯ.
ಮಿಥುನ
ಅಹಿತಕರ ಪರಿಸ್ಥಿತಿ ಎದುರಿಸುವಿರಿ. ಗಟ್ಟಿ ಮನಸ್ಸು ಅವಶ್ಯ. ಭಾವುಕರಾಗಿ ದುರ್ಬಲರಾಗಬೇಡಿ. ಆರ್ಥಿಕತೆ ಸ್ಥಿರ.
ಕಟಕ
ದೈಹಿಕ ಆರೋಗ್ಯದ ಜತೆಗೇ ಮಾನಸಿಕ ಸ್ವಾಸ್ಥ್ಯಕ್ಕೂ ಗಮನ ಕೊಡಿ. ಸಣ್ಣ ವಿಷಯಗಳಿಗೆ ಅತಿಯಾಗಿ ಚಿಂತಿಸಲು ಹೋಗದಿರಿ.
ಸಿಂಹ
ವೃತ್ತಿಕ್ಷೇತ್ರದಲ್ಲಿ ನಿಮ್ಮ ಅಧಿಪತ್ಯ ಸಾಧಿಸಲು ಯತ್ನಿಸುವಿರಿ. ಕೆಲವರ ವಿರೋಧ ಉಂಟಾದೀತು. ಮನೆಯಲ್ಲಿ ಸೌಹಾರ್ದ ವಾತಾವರಣ.
ಕನ್ಯಾ
ನಿಮಗೆ ಆಗದ ವಿಷಯದಲ್ಲಿ ರಾಜಿ ಮಾಡದಿರಿ. ಅದರಿಂದ ಸಮಸ್ಯೆ ಎದುರಿಸುವಿರಿ. ಅನುಚಿತ ಕಾರ್ಯದಿಂದ ಕೆಟ್ಟ ಹೆಸರು ಬಂದೀತು.
ತುಲಾ
ಏಕಾಂಗಿಯಾಗಿ ಕೊರಗಬೇಡಿ. ಬೇಸರವಿದ್ದರೆ ಹಂಚಿಕೊಳ್ಳಿ. ವ್ಯವಹಾರದಲ್ಲಿ ಕೆಲವರ ಅಡ್ಡಿ ಎದುರಾದೀತು. ಆರ್ಥಿಕ ಪ್ರಗತಿ ಕುಂಠಿತ.
ವೃಶ್ಚಿಕ
ಎಲ್ಲರನ್ನು ಕುರುಡಾಗಿ ನಂಬಬೇಡಿ. ನಿಮ್ಮ ವಿರುದ್ಧ ವರ್ತಿಸುವವರೂ ಇದ್ದಾರೆ. ಕಠಿಣ ಕಾರ್ಯಕ್ಕೆ ಮುನ್ನ ದೇಹಕ್ಕೆ ವಿಶ್ರಾಂತಿ ಕೊಡಿ. ಕೌಟುಂಬಿಕ ಸಹಕಾರ.
ಧನು
ಕೆಲಸದ ಒತ್ತಡದ ಮಧ್ಯೆಯೂ ಕುಟುಂಬದ ಹಿತಾಸಕ್ತಿ ಮರೆಯಬೇಡಿ. ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳುವ ಅವಕಾಶ. ದೈಹಿಕ ಜಡತ್ವ ಕಾಡಲಿದೆ..
ಮಕರ
ಅಡೆತಡೆಗಳಿಗೆ ಅಂಜಬೇಡಿ. ಅದನ್ನೆ ಯಶಸ್ಸಿನ ಮೆಟ್ಟಿಲಾಗಿಸಿ. ಹೊಸ ವ್ಯವಹಾರಕ್ಕೆ ಅವಸರದಿಂದ ಕೈ ಹಾಕಬೇಡಿ.
ಕುಂಭ
ಯೋಜಿಸಿ ಕಾರ್ಯ ಎಸಗಿ. ಇಲ್ಲವಾದರೆ ಅಸ್ತವ್ಯಸ್ತವಾದೀತು. ಆದಾಯ- ಖರ್ಚಿನ ಮಧ್ಯೆ ಸಮತೋಲನ ಸಾಧಿಸಿರಿ.
ಮೀನ
ಉದ್ದೇಶ ಸಾಧನೆಗೆ ಕಠಿಣ ದುಡಿಮೆ ಅಗತ್ಯ. ಸಂಗಾತಿ ಜತೆ ಸೌಹಾರ್ದ ಸಂಬಂಧ. ಭಿನ್ನಮತ ನಿವಾರಣೆ. ಆದಾಯ, ಖರ್ಚು ಎರಡೂ ಹೆಚ್ಚು.

error: Content is protected !!