April 30, 2026
Thursday, April 30, 2026
spot_img

ಫೆ.17ರೊಳಗೆ ತೆರಿಗೆ ಕಟ್ಟಿ, ಇಲ್ಲದಿದ್ದರೆ ನಿಮ್ಮ ಆಸ್ತಿಗೆ ಬೀಳಲಿದೆ ಜಿಬಿಎ ಹರಾಜು ಸುತ್ತಿಗೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಸ್ತಿ ತೆರಿಗೆ ಪಾವತಿಸಲು ಮೀನಮೇಷ ಎಣಿಸುತ್ತಿರುವ ಮಾಲೀಕರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಬಿಸಿ ಮುಟ್ಟಿಸಿದೆ. ಸುಮಾರು 437 ಕೋಟಿ ರೂ.ಗಳಿಗೂ ಅಧಿಕ ತೆರಿಗೆ ಬಾಕಿ ಉಳಿಸಿಕೊಂಡಿರುವ 7,020 ಆಸ್ತಿಗಳನ್ನು ಹರಾಜು ಹಾಕಲು ಪ್ರಾಧಿಕಾರ ನಿರ್ಧರಿಸಿದೆ.

ತೆರಿಗೆ ಬಾಕಿ ಪಾವತಿಸಲು ಫೆಬ್ರವರಿ 17 ಕೊನೆಯ ದಿನವಾಗಿದೆ. ನಿಗದಿತ ಸಮಯದೊಳಗೆ ಹಣ ಪಾವತಿಸದಿದ್ದರೆ ‘ಜಿಬಿಎ ಕಾಯ್ದೆ’ ಅಡಿಯಲ್ಲಿ ಆಸ್ತಿಗಳನ್ನು ನೇರವಾಗಿ ಜಪ್ತಿ ಮಾಡಲಾಗುವುದು. ಆಯಾ ವಲಯಗಳ ಜಂಟಿ ಆಯುಕ್ತರ ಕಚೇರಿಗಳಲ್ಲಿ ಹರಾಜು ಪ್ರಕ್ರಿಯೆಗಳು ಜರುಗಲಿವೆ.

ಹರಾಜಿಗೆ ಗುರುತಿಸಲಾದ ಆಸ್ತಿಗಳ ವಿವರ ಮತ್ತು ನೋಟಿಸ್‌ಗಳ ಪಟ್ಟಿಯನ್ನು ಜಿಬಿಎ ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.

ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಈ ಬಗ್ಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಹರಾಜಿನಿಂದ ಪಾರಾಗಲು ಮಾಲೀಕರು ತಕ್ಷಣವೇ ಸಂಪೂರ್ಣ ಬಾಕಿ ತೆರಿಗೆ ಪಾವತಿಸಬೇಕೆಂದು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !