Wednesday, October 29, 2025

ನಾಳೆಯೇ ಟ್ರಯಲ್‌ ಫಿಕ್ಸ್‌ ಮಾಡಿ, ನಾಡಿದ್ದು ಮರಣದಂಡನೆ ಕೊಡಿ! ಎಲ್ಲಾದಕ್ಕೂ ರೆಡಿ ಎಂದ ದರ್ಶನ್‌ ಪರ ಲಾಯರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಜೈಲಿನಲ್ಲಿರುವ ಆರೋಪಿ ದರ್ಶನ್​​ಗೆ ಸೌಲಭ್ಯ ನೀಡುತ್ತಿಲ್ಲ ಎನ್ನುವ ಅರ್ಜಿ ಸಂಬಂಧ ಕಾನೂನು ಪ್ರಾಧಿಕಾರದ ಅಧಿಕಾರಿಗಳು ವರದಿ ಸಲ್ಲಿಸಿದ್ದಾರೆ. ಈ ವರದಿ ಸಂಬಂಧ ವಾದ ಪ್ರತಿವಾದ ನಡೆದಿದೆ.

ಟ್ರಯಲ್ ಆರೋಪಿಗಳು ತಡ ಮಾಡುತ್ತಿರುವ ಸಂಬಂಧ ಮೆಮೋ ಸಲ್ಲಿಕೆ ಮಾಡಲಾಗಿದ್ದು ಪ್ರಾಸಿಕ್ಯೂಷನ್ ನಿಂದ ಮೆಮೋ ಸಲ್ಲಿಕೆ ಸಂಬಂಧ ಆಕ್ಷೇಪಣೆ ಸಲ್ಲಿಕೆಯಾಗಿದೆ. ದರ್ಶನ್ ಪರ ವಕೀಲ ಸುನೀಲ್ ಆಕ್ಷೇಪಣೆ ಸಲ್ಲಿಕೆ ಮಾಡಿ ವಾದ ಮಾಡಿದ್ದಾರೆ.

ಎರಡುವರೆ ತಿಂಗಳು ಸಮಯ ಹಾಳಾಗಿದೆ. ಇನ್ನು ಎಷ್ಟು ಸಮಯ ಕಾಯುವುದು? ನಾವು ಜೈಲಿನಲ್ಲಿ ಇರಲು ಸಿದ್ದವಿದ್ದೇವೆ‌. ಸುಪ್ರೀಂಕೋರ್ಟ್ ಈ ಪ್ರಕರಣ ದಲ್ಲಿ ನಿಗಾ ಇಟ್ಟಿದೆ.

ಟ್ರಯಲ್ ಯಾವ ರೀತಿ ನಡೆಸಬೇಕು ಎಂಬುದರ ಬಗ್ಗೆ ನಾನು ಆದೇಶಗಳನ್ನು ನೀಡುತ್ತೇನೆ. ನಾಳೆನೇ ಟ್ರಯಲ್ ಫಿಕ್ಸ್ ಮಾಡಿ, ನಾಳೆ ತೀರ್ಪು ಕೊಡಿ. ನಾಡಿದ್ದು ಶಿಕ್ಷೆ ಕೊಟ್ಟು ಮರಣ ದಂಡನೆ ಕೋಡಿ ನಾವು ಸಿದ್ದ. ಎಲ್ಲಾ ಆರೋಪಿಗಳಿಗೂ ಸೌಲಭ್ಯ ಕೇಳುವ ಅಧಿಕಾರ ಇದೆ. ಇದು ಮೂಲಭೂತ ಹಕ್ಕುಗಳು ಎಂದಿದ್ದಾರೆ.

ಆರೋಪಿಗಳು ತಮ್ಮ ಹಕ್ಕಿಗಾಗಿ ಅರ್ಜಿ ಸಲ್ಲಿಸುತ್ತಿದ್ದಾರೆ ಎಂದು ದರ್ಶನ್ ಪರ ವಕೀಲ ಹೇಳಿದ್ದಾರೆ. ನ್ಯಾಯಸಮ್ಮತ ಟ್ರಯಲ್ ನಡೆಯಬೇಕೆಂಬುದು ನಿಯಮ. ಅದಕ್ಕಾಗಿ ಮೂರು ನಾಲ್ಕು ವರ್ಷ ಜೈಲಿನಲ್ಲಿರಲು ಹಿಂಜರಿಯುವುದಿಲ್ಲ. ನಾಳೆಯೇ ದೋಷಾರೋಪ ನಿಗದಿ ಮಾಡಿ, ನಾಡಿದ್ದೇ ಗಲ್ಲುಶಿಕ್ಷೆ ಕೊಡಿ ಎಂದಿದ್ದಾರೆ.

error: Content is protected !!