Sunday, November 2, 2025

HEALTH | ಯಾವಾಗ್ಲೂ ಕೂತಲ್ಲೇ ಕೂತಿರ್ತೀರಾ? ಇದನ್ನೆಲ್ಲಾ ಫಾಲೋ ಮಾಡದಿದ್ರೆ ಬೆನ್ನು ನೋವು ಖಂಡಿತ

ಹೆಚ್ಚು ಸಮಯ ಕೂತಲ್ಲೇ ಕೂತು ಕೆಲಸ ಮಾಡ್ತೀರಾ? ಹೀಗೆ ಮಾಡ್ತಾ ಇದ್ರೆ ಒಂದು ಸಮಯದಲ್ಲಿ ನಿಮಗೆ ಬೆನ್ನು ನೋವು ಬರೋದು ಖಂಡಿತ. ಬೆನ್ನು ಮೂಳೆಯ ನೋವು ಸಹಿಸಲು ಅಸಾಧ್ಯ. ಕೂರೋಕೂ ಕಷ್ಟ, ನಿಲ್ಲೋಕೂ ಕಷ್ಟ, ಮಲಗೋದಕ್ಕೂ ಕಷ್ಟ ಎನ್ನುವಂಥ ಪರಿಸ್ಥಿತಿ ತಂದುಕೊಳ್ಳಬೇಡಿ. ಬೆನ್ನುನೋವು ಬರಬಾರದೆಂದರೆ ಹೀಗೆ ಮಾಡಿ..

ಬೆನ್ನಿನ ಆರೋಗ್ಯ ಎಂದರೆ ಬೆನ್ನಿಗಾಗಿಯೇ ವ್ಯಾಯಾಮ ಮಾಡಬೇಕು. ಯೋಗ, ನಡಿಗೆ, ಈಜು ಇಂತಹ ಯಾವುದಾದರೂ ಮಾಡುತ್ತಿರಬೇಕು. ಹೀಗೆ ಮಾಡುವುದರಿಂದ ನಮ್ಮ ಬೆನ್ನು ಮೂಳೆಯ ಸುತ್ತಲಿನ ಮಾಂಸಖಂಡಗಳು ಸದೃಢವಾಗುತ್ತವೆ. ಧೂಮಪಾನ ಮಾಡುವುದರಿಂದ ಸಾಮಾನ್ಯವಾಗಿ ನಮ್ಮಲ್ಲಿ ನಿಕೋಟಿನ್‌ ಅಂಶ ರಕ್ತಪರಿಚಲನೆಗೆ ಅಡ್ಡಿ ಮಾಡುತ್ತೆ. ಇದು ಬೆನ್ನುಹುರಿಯ ರಕ್ತದ ಸರಬರಾಜನ್ನು ಕಡಿಮೆ ಮಾಡುತ್ತದೆ. 

ದೇಹದ ತೂಕ ಹೆಚ್ಚು ಆಗದಂತೆ ನಮ್ಮ ವಯಸ್ಸಿಗೆ ತಕ್ಕಂತೆ ಇರುವಂತೆ ನೋಡಿಕೊಳ್ಳಬೇಕು. ಏಕೆಂದರೆ ದೇಹದ ಭಾರ ಅಧಿಕವಾದರೆ ಬೆನ್ನು ನೋವು ಕಾಡಲು ಶುರುವಾಗುತ್ತದೆ. ತೂಕ ಹೆಚ್ಚಾದರೆ ಕೀಲುಗಳ ಮೇಲೆಯೂ ಒತ್ತಡ ಹೆಚ್ಚುತ್ತದೆ. ಹೀಗಾಗಿ ಬೆನ್ನು ಮೂಳೆಯ ಆರೋಗ್ಯಕ್ಕಾಗಿ ದೇಹದ ಭಾರ ಹೆಚ್ಚಳವಾಗದಂತೆ ಆಹಾರ ಸೇವನೆ ಮಾಡಬೇಕು. 

ಬೆನ್ನುಮೂಳೆಯ ಆರೋಗ್ಯಕ್ಕಾಗಿ ಉತ್ತಮ ಭಂಗಿ, ಆರೋಗ್ಯಕರ ತೂಕ ನಿರ್ವಹಣೆ, ನಿಯಮಿತ ವ್ಯಾಯಾಮ ಮತ್ತು ಧೂಮಪಾನ ತ್ಯಜಿಸುವುದು ಮುಖ್ಯ. ತೀವ್ರ ಬೆನ್ನು ನೋವಿಗೆ ನೋವು ನಿವಾರಕಗಳು, ಬಿಸಿ, ತಣ್ಣನೆಯ ಪ್ಯಾಕ್‌ಗಳು ಸಹಾಯ ಮಾಡಬಹುದು. ದೀರ್ಘಕಾಲದ ನೋವಿಗೆ ವೈದ್ಯರ ಸಲಹೆಯೊಂದಿಗೆ ಶಸ್ತ್ರಚಿಕಿತ್ಸೆ ಮಾಡಿಸಬಹುದು. 

error: Content is protected !!